Nithyananda Kailasa: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ 2020 ರಲ್ಲಿ ಕೈಲಾಸದ ಕುರಿತು ಹೇಳಿದ್ದು, ಇದು ಎಲ್ಲಿದೆ ಎನ್ನೋದು ಮಾತ್ರ ಎಲ್ಲರಲ್ಲಿ ಯಕ್ಷ ಪ್ರಶ್ನೆಯಾಗಿತ್ತು. ಇದೀಗ ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗವನ್ನು ಆತನ ಶಿಷ್ಯರೇ ಬಹಿರಂಗ ಮಾಡಿದ್ದಾರೆ.
ಮದ್ರಾಸ್‌ನ ಹೈಕೋರ್ಟ್ ಮಧುರೈ ಪೀಠದಲ್ಲಿ ನಿತ್ಯಾನಂತ ಎಲ್ಲಿದ್ದಾನೆ ಎನ್ನುವ ಕುರಿತು ಬಹಿರಂಗ ಆಗಿದೆ. ವಿಶೇಷವೇನೆಂದರೆ ಈ ಕುರಿತು ಆತನ ಶಿಷ್ಯರೇ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗವನ್ನು ಬಹಿರಂಗ ಪಡಿಸಿದ್ದಾರೆ. ತಿರುವಣ್ಣಮಲೈ ಮಠದಿಂದ ಸ್ವಾಮಿ ನಿತ್ಯಾನಂದನ ನಿಷೇಧಕ್ಕೆ ಕುರಿತಂತೆ ಮೇಲ್ಮನವಿ ವಿಚಾರಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.
ಸ್ವಯಂ ಘೋಷಿತ ದೇವಮಾನವ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದಾನಂತೆ. ಆಸ್ಟ್ರೇಲಿಯಾ ಬಳಿಯ ಯುಎಸ್‌ಕೆ ಎಂಬ ಸ್ವಯಂ ಘೋಷಿತ ರಾಷ್ಟ್ರದಲ್ಲಿ ಈತ ಇದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಅರ್ಜಿದಾರರು ಎಲ್ಲಿದ್ದಾರೆ ಎಂದು ನ್ಯಾಯಾಲಯ ಕೇಳಿದಾಗ ಇದಕ್ಕೆ ಸಿಕ್ಕ ಉತ್ತರ ಕೈಲಾಸ. ಹಾಗಾದರೆ ಕೈಲಾಸ ಎಲ್ಲಿದೆ ಎಂದು ಕೋರ್ಟ್ ಕೇಳಿದಾಗ, ನಿತ್ಯಾನಂದನ ಶಿಷ್ಯ ಅರಚನ ತಿರುಮಲ ಉತ್ತರ ನೀಡಿದ್ದಾರೆ. ಆಸ್ಟ್ರೇಲಿಯಾ ಬಳಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಇದೆ. ಇದಕ್ಕೆ ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ನಿತ್ಯಾನಂದ ಪರ ವಕಾಲತ್ತು ಮಾಡಲು ಹೊಸ ವಕೀಲರನ್ನು ನೇಮಿಸಲು ಅನುಮತಿ ಕೋರ್ಟ್‌ನಲ್ಲಿ ಕೇಳಲಾಗಿದ್ದು, ಮನವಿಯನ್ನು ಸ್ವೀಕರಿಸಿದ ಕೋರ್ಟ್ ವಿಚಾರಣೆ ಮುಂದೂಡಿದೆ.
