Snake bite: ಮಧ್ಯಪ್ರದೇಶ ಬಾಲ್‌ಘಾಟ್ ಪ್ರದೇಶದ ಖುಡ್‌ಸೋದಿ ಗ್ರಾಮದಲ್ಲಿ ಗುರುವಾರ ಮುಂಜಾನೆ ವಿಚಿತ್ರ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬರಿಗೆ ಕಚ್ಚಿದ ವಿಷಕಾರಿ ಹಾವು ಐದೇ ನಿಮಿಷಗಳಲ್ಲಿ ಸಾವನ್ನಪ್ಪಿದೆ.
ಘಟನೆಯಲ್ಲಿ ಹಾವು ಕಚ್ಚಿದ ವ್ಯಕ್ತಿ ಅಪಾಯದಿಂದ ಪಾರಾಗಿದ್ದರೆ, ಅತ್ತ ಹಾವು ಸಾವನ್ನಪ್ಪಿದೆ. ಹಾವು ಕಚ್ಚಿದ ವ್ಯಕ್ತಿಯನ್ನು 25 ವರ್ಷದ ಸಚಿನ್ ನಾಗಪುರೆ ಎಂದು ಗುರುತಿಸಲಾಗಿದೆ. ಸಚಿನ್ ನಾಗಪುರೆ ಕಾರ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಗುರುವಾರ ಮುಂಜಾನೆ 7 ಗಂಟೆ ಹೊತ್ತಿಗೆ ತಮ್ಮ ಜಮೀನಿಗೆ ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಹಾವಿನ ಮೇಲೆ ಕಾಲಿಟ್ಟಿದ್ದು, ಇವರಿಗೆ ಹಾವು ಕಚ್ಚಿದೆ.
ಇದಾಗಿ 5ರಿಂದ 6 ನಿಮಿಷದಲ್ಲಿ ಅನೀರಿಕ್ಷಿತವಾಗಿ ಹಾವು ಕೂಡ ಸಾವನ್ನಪ್ಪಿದೆ. ಮನುಷ್ಯರಿಗೆ ಕಚ್ಚಿದ ನಂತರ ಹಾವು ಸಾವನ್ನಪ್ಪುವುದು ಅತ ಅಪರೂಪವಾಗಿದೆ. ಬಹುಶಃ ಇದಕ್ಕೆ ಬೇರೆನಾದರು ಕಾರಣ ಇರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
