KRS Dam: “ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಕೆಆರ್ ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು” ಎಂದು ಶ್ರೀರಂಗಪಟ್ಟಣ ತಹಶೀಲ್ದಾರ್ ಪತ್ರ ಮುಖೇನ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ಈ ಪತ್ರ ಬರೆಯಲಾಗಿದೆ ಎಂದು ತಹಶೀಲ್ದಾರ್ ಹೇಳಿದ್ದಾರೆ. ಕೆಆರ್‌ಎಸ್ ಡ್ಯಾಂ 117.40 ಅಡಿಗಳಿಷ್ಟಿದ್ದು, ಸಂಪೂರ್ಣ ಭರ್ತಿಗೆ 7 ಅಡಿ ಬಾಕಿ ಇದೆ. 23,473 ಕ್ಯೂಸೆಕ್ ನೀರು ಒಳಹರಿವು ಇದೆ.
ಕೆಆರ್‌ಎಸ್ 45 ವರ್ಷಗಳ ದಾಖಲೆ ಬರೆಯುವ ಸಂಭ್ರಮ!
ಕೊಡಗು ಜಿಲ್ಲೆ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ರೈತರ ಜೀವನಾಡಿ ಕೆಆರ್‌ಎಸ್ ಜಲಾಶಯ 45 ವರ್ಷ ಗಳ ಬಳಿಕ ಜೂನ್ ತಿಂಗಳಲ್ಲೇ ಭರ್ತಿ ಯಾಗುವ ಕುತೂಹಲ ಮೂಡಿಸಿದೆ.
ಕೆಆರ್‌ಎಸ್ ಗರಿಷ್ಟ ಮಟ್ಟ 124.80 ಅಡಿ ಇದ್ದು ಸಂಪೂರ್ಣ ಭರ್ತಿಯಾಗಲು ಇನ್ನು 7 ಅಡಿಗಳು ಮಾತ್ರ ಬಾಕಿಯಿದೆ. ಇದೇ ರೀತಿ ಮಳೆ ಮುಂದುವರೆದರೆ ಇನ್ನು ನಾಲೈದು ದಿನಗಳಲ್ಲಿ ಕೆಆರ್‌ಎಸ್ ಭರ್ತಿಯಾಗುವ ಸಾಧ್ಯತೆಗಳಿವೆ ಎಂದು ನೀರಾವರಿ ತಜ್ಞರು ತಿಳಿಸಿದ್ದಾರೆ. ಸಾಮಾನ್ಯವಾಗಿ ಕೆಆರ್ಯ.ಎಸ್ ಭರ್ತಿಯಾಗುತ್ತಿದ್ದುದ್ದು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರ. ಕೆಲವು ವರ್ಷ ಜುಲೈನಲ್ಲಿ ಭರ್ತಿಯಾಗಿದ್ದ ಉದಾಹರಣೆಗಳಿವೆ. ಆದರೆ ಈ ಬಾರಿ ಜೂನ್ ತಿಂಗಳಲ್ಲೇ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿರುವುದು 45 ವರ್ಷಗಳ ಬಳಿಕ ದಾಖಲೆಯಾಗುವ ಸಾಧ್ಯತೆ ಇದೆ.
ಕಾವೇರಿ ಜಲಾನಯನ ಪ್ರದೇಶ ಮತ್ತು ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಕೆಆರ್‌ಎಸ್‌ಗೆ 29251 ಸಾವಿರ ಕ್ಯುಸೆಕ್ ಒಳ ಹರಿವಿದ್ದು, 1255 ಕ್ಯುಸೆಕ್ ನೀರನ್ನು ಮಾತ್ರ ಹೊರಬಿಡಲಾಗುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಹಾರಂಗಿ ಜಲಾಶಯದಲ್ಲೂ ಹೊರ ಹರಿವು ಹೆಚ್ಚಾಗಿರುವ ಕಾರಣ ಕೆ.ಆರ್ಳ.ಸಾಗರ ಅಣೆಕಟ್ಟೆಯ ಒಳಹರಿವಿನಲ್ಲಿ ಹೆಚ್ಚಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಜೂನ್ ತಿಂಗಳ ಇದೇ ದಿನ ಕೆಆರ್‌ಎಸ್‌ನಲ್ಲಿ 87.20 ಅಡಿ ಮಾತ್ರ ನೀರಿತ್ತು ಒಳಹರಿವು 1209 ಕ್ಯುಸೆಕ್, ಹೊರಹರಿವು 951 ಕ್ಯುಸೆಕ್ ದಾಖಲಾಗಿತ್ತು.
