Home » Kiccha Suddep : ನಟ್ಟು, ಬೋಲ್ಟ್ ಟೈಟ್ ಹೇಳಿಕೆ – ಡಿಕೆ ಶಿವಕುಮಾರ್ ಗೆ ತಿರುಗೇಟುಕೊಟ್ಟ ಕಿಚ್ಚ ಸುದೀಪ್

Kiccha Suddep : ನಟ್ಟು, ಬೋಲ್ಟ್ ಟೈಟ್ ಹೇಳಿಕೆ – ಡಿಕೆ ಶಿವಕುಮಾರ್ ಗೆ ತಿರುಗೇಟುಕೊಟ್ಟ ಕಿಚ್ಚ ಸುದೀಪ್

0 comments

Kiccha Sudeep : ಚಲನಚಿತ್ರನ ಮಂಡಳಿಯ ಕಾರ್ಯಕ್ರಮ ಒಂದರಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿನಿಮಾದವರ ನಟ್ಟು ಬೋಟ್ ಟೈಟ್ ಮಾಡುವುದು ನಮಗೆ ಗೊತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಡಿಕೆಶಿ ಅವರ ಈ ಮಾತು ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಹಲವು ನಟ ನಟಿಯರು ಈ ಕುರಿತು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಕಿಚ್ಚ ಸುದೀಪ್ ಅವರು ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

 

ರಿಪಬ್ಲಿಕ್ ಕನ್ನಡದ ಸಂಗಮ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ನಾವು ಓಡಾಡೊ ಕಾರುಗಳ ನಟ್ಟು-ಬೋಲ್ಟ್ ಕೂಡ ಕೈಟ್ ಇರಬೇಕು.. ಅದಕ್ಕೆ ಮೆಕಾನಿಕ್ ಹತ್ರ ಹೋಗಬೇಕು ಆ ಮೆಕಾನಿಕ್ಗೆ ಮಾತ್ರ ಕಾರಿನ ನಟ್ಟು-ಬೋಲ್ಟ್ ವಿಚಾರ ಗೊತ್ತಿರುತ್ತೆ.. ಹೀಗಾಗಿ ಚಿತ್ರರಂಗದ ವಿಚಾರ ಚಿತ್ರರಂಗದಲ್ಲಿ ಇರುವವರಿಗೆ ಮಾತ್ರ ಗೊತ್ತು. ನನಗೆ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದ್ರೆ ಅವರು ಕೆಲಸ ಸತ್ಯಗಳನ್ನು ತಿಳಿದುಕೊಂಡು ಮಾತನಾಡಿದ್ರೆ ನಮ್ಗೆ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತಿತ್ತು. ಅವರ ಈ ಹೇಳಿಕೆ ಚಿತ್ರರಂಗದಲ್ಲಿ ಅನೇಕ ಮಂದಿಯ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾರೆ.

 

ಅಲ್ಲದೆ ಚಿತ್ರರಂಗದಲ್ಲಿ ತುಂಬಾ ಗೌರವಸ್ತರಿದ್ದಾರೆ. ನಾವು ಯಾರೂ ಮೈ ಮಾರ್ಕೊಂಡು ಬಾಳ್ತಾ ಇರೊ ವ್ಯಕ್ತಿಗಳಲ್ಲ.. ಚಿತ್ರರಂಗದಲ್ಲಿ ನಾವೆಲ್ಲ ಇರೋದು ಮನರಂಜನೆ ನೀಡೋಕೆ.. ನಮ್ಮ ಮನೆಯಲ್ಲಿ ಸಾವಾಗುತ್ತಿದೆಯಾ ಅಥವಾ ಬದುಕಿದ್ದಾರ ಅಂತ ನೋಡದೆ ನಿಮ್ಮನ್ನ ನಗಿಸೊ ಪ್ರಯತ್ನ ನಾವು ಮಾಡ್ತಾ ಇರಬೇಕಾದ್ರೆ ಕೆಲವು ಸತ್ಯಗಳನ್ನು ತಿಳಿದುಕೊಂಡು ಮಾತನಾಡುವುದು ಒಳ್ಳೆಯದು. ಅವರಿಗೆ ಏನೋ ತಪ್ಪು ಮಾಹಿತಿ ಹೋಗಿದೆ.. ಹೀಗಾಗಿ ಆ ಮಾತು ಬಂದಿದೆ.. ಚಿತ್ರರಂಗದಲ್ಲಿ ಎಲ್ಲರ ನಟ್ಟು-ಬೋಲ್ಟ್ ಟೈಟ್ ಇದೆ.. ನಾವೆಲ್ಲ ಯಾಕೆ ರಿಯಾಕ್ಟ್ ಮಾಡಿಲ್ಲ ಅಂದ್ರೆ ಅದು ನಾವು ಅವರ ಮೇಲೆ ಇಟ್ಟಿರುವ ಗೌರವ ಎಂದಿದ್ದಾರೆ ಕಿಚ್ಚ.

You may also like