New delhi: ಇಸ್ರೇಲ್ ಮತ್ತು ಇರಾನ್ ಮಧ್ಯದ ಯುದ್ಧಕ್ಕೆ ಅಮೇರಿಕ ಅಧಿಕೃತ ಪ್ರವೇಶ ಮಾಡಿದೆ. ಇರಾನ್ ನ ಅಮೆರಿಕ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದೆ. ಇದೀಗ ಅಮೆರಿಕ ಪೋರ್ಡೋ, ನಟಾಂಜ್, ಎಸ್ಟಹಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ. ಇರಾನ್ ನ 3 ಪರಮಾಣು ನೆಲೆಗಳ ಮೇಲೆ ಅಮೆರಿಕ ತಡರಾತ್ರಿ ದಾಳಿ ನಡೆಸಿದೆ.
“ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಮೂರು ಪರಮಾಣು ಕೇಂದ್ರಗಳ ಮೇಲೆ ನಾವು ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ಎಲ್ಲಾ ವಿಮಾನಗಳು ಈಗ ಇರಾನ್ ವಾಯುಪ್ರದೇಶದ ಹೊರಗೆ ಇವೆ. ಬಾಂಬ್‌ಗಳ ಸಂಪೂರ್ಣ ಪೇಲೋಡ್ ಅನ್ನು ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಬೀಳಿಸಲಾಯಿತು. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಮನೆಗೆ ಹೋಗುತ್ತಿವೆ. ನಮ್ಮ ಮಹಾನ್ ಅಮೇರಿಕನ್ ಯೋಧರಿಗೆ ಅಭಿನಂದನೆಗಳು. ಇದನ್ನು ಮಾಡಬಹುದಾದ ಮತ್ತೊಂದು ಮಿಲಿಟರಿ ಜಗತ್ತಿನಲ್ಲಿ ಇಲ್ಲ. ಈಗ ಶಾಂತಿಯ ಸಮಯ! ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು.” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಪೋಸ್ಟ್ ಮಾಡಿದ್ದಾರೆ.
ಅಮೆರಿಕ – ಇಸ್ರೇಲ್ ಸಮನ್ವಯವನ್ನು ಶ್ಲಾಘಿಸಿದ ಟ್ರಂಪ್, “ನಾವು ಒಂದು ತಂಡವಾಗಿ ಕೆಲಸ ಮಾಡಿದ್ದೇವೆ, ಬಹುಶಃ ಯಾವುದೇ ತಂಡವು ಹಿಂದೆಂದೂ ಕೆಲಸ ಮಾಡಿಲ್ಲ. ಇಸ್ರೇಲ್‌ಗೆ ಈ ಭಯಾನಕ ಬೆದರಿಕೆಯನ್ನು ಅಳಿಸಿಹಾಕುವಲ್ಲಿ ನಾವು ಬಹಳ ದೂರ ಸಾಗಿದ್ದೇವೆ” ಎಂದು ಹೇಳಿದ್ದಾರೆ. ಅವರು ಇಸ್ರೇಲ್ ಪಡೆಗಳ ಪಾತ್ರವನ್ನು ಮತ್ತಷ್ಟು ಹೊಗಳಿದರು. “ಇಸ್ರೇಲ್ ಮಿಲಿಟರಿ ಮಾಡಿದ ಅದ್ಭುತ ಕೆಲಸಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. “ಒಂದೋ ಶಾಂತಿ ಇರುತ್ತದೆ, ಅಥವಾ ಕಳೆದ ಎಂಟು ದಿನಗಳಲ್ಲಿ ನಾವು ಕಂಡಿದ್ದಕ್ಕಿಂತ ಹೆಚ್ಚಿನ ದುರಂತ ಇರಾನ್‌ಗೆ ಸಂಭವಿಸುತ್ತದೆ” ಎಂದು ಅವರು ಎಚ್ಚರಿಸಿದರು. ಮಧ್ಯಪ್ರಾಚ್ಯದ ಪೀಡಕ ಇರಾನ್ ಪ್ರಪಂಚದ ನಂಬರ್ 1 ಭಯೋತ್ಪಾದಕ ಪೋಷಕ ರಾಷ್ಟ್ರ. ಅದೀಗ ಶಾಂತಿ ಸ್ಥಾಪಿಸಬೇಕು” ಎಂದು ಅವರು ಹೇಳಿದರು.
ಇದನ್ನೂ ಓದಿ:ಸೌಜನ್ಯ ಹೆಸರಲ್ಲಿ ಹೆಲ್ಪ್ ಲೈನ್ ತೆರೆದು ಪುಂಜಾಲಕಟ್ಟೆಯ ಗಾಯಕನಿಗೆ ವಂಚಿಸಿದ ಬೆಂಗಳೂರು ಮಹಿಳೆ!
