Home » Death: ಕಾರ್ಕಳ: ಮಕ್ಕಳಾಗದ ಚಿಂತೆಯಲ್ಲಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

Death: ಕಾರ್ಕಳ: ಮಕ್ಕಳಾಗದ ಚಿಂತೆಯಲ್ಲಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

0 comments

Suicide: ಮಕ್ಕಳಾಗದ ಚಿಂತೆಯಲ್ಲಿದ್ದ ಕೇರಳ ಮೂಲದ ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.

 

ಮರ್ಣೆ ಗ್ರಾಮದ ಅಜೆಕಾರಿನ ಬೊಳ್ಳ ನಿವಾಸಿ ಗೀತಾ(52) ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

 

ಇವರಿಗೆ ಕಳೆದ 20 ವರ್ಷಗಳ ಹಿಂದೆ ಕುರಿಯಕೋಸ್ ಎಂಬವರ ಜತೆ ಮದುವೆಯಾಗಿತ್ತು. ಆದರೆ ಮಕ್ಕಳಾಗಿರಲಿಲ್ಲ. ಕಳೆದ ಎರಡು

ವರ್ಷದ ಹಿಂದೆ ಗಂಡ ಮೃತಪಟ್ಟ ಹಿನ್ನೆಲೆಯಲ್ಲಿ ಗೀತಾ ಅವರು ಕೆ.ಪಿ ಅಬ್ರಹಾಂ ಅವರನ್ನು ಎರಡನೇ ಮದುವೆಯಾಗಿದ್ದರು. ಇವರಿಬ್ಬರ ನಡುವೆ ದಾಂಪತ್ಯದಲ್ಲಿ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಹಾಗೂ ಮಕ್ಕಳಿಲ್ಲದ ಕೊರಗಿನಿಂದ ಜೀವನದಲ್ಲಿ ಜಿಗುಪ್ಪೆ ಗೊಂಡು ಶುಕ್ರವಾರ ರಾತ್ರಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ

ಅವರನ್ನು ತಕ್ಷಣವೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

ಇದನ್ನೂ ಓದಿ: Vijayapura : ಪ್ರಬಲ ಸ್ವಾಮೀಜಿ ವಿರುದ್ಧ ಅಕ್ರಮ ಸಂಬಂಧ ಆರೋಪ – ಮಠದಿಂದಲೇ ಹೊರ ಹಾಕಿದ ಗ್ರಾಮಸ್ಥರು

You may also like