Maharashtra: ಮಹಾರಾಷ್ಟ್ರದ ಸಾಂಗ್ಲಿಯಿಂದ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯ ಜೀವವನ್ನು ಆಕೆಯ ತಂದೆಯ ಕೋಪದಿಂದಾಗಿ ಸರ್ವನಾಶವಾಗಿದೆ. ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದಕ್ಕೆ, ವಿದ್ಯಾರ್ಥಿನಿಯ ತಂದೆ ಆಕೆಯನ್ನು ಯದ್ವಾತದ್ವ ಹೊಡೆದಿದ್ದರಿಂದ ಸಾವನ್ನಪ್ಪಿದ್ದಾಳೆ.
ಈ ಘಟನೆ ಸಾಂಗ್ಲಿಯಲ್ಲಿ ನಡೆದಿದೆ. ಶಾಲಾ ಪ್ರಾಂಶುಪಾಲ ತಂದೆ ತನ್ನ 17 ವರ್ಷದ ಮಗಳು ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದಾಳೆ ಎಂಬ ಒಂದೇ ಕಾರಣಕ್ಕಾಗಿ ಅವಳನ್ನು ಹೊಡೆದು ಕೊಂದಿರುವ ಘಟನೆ ನಡೆದಿದೆ.
ಮೃತ ಸಾಧನಾ ಭೋಸಲೆ 12 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ನೀಟ್‌ಗೆ ತಯಾರಿ ನಡೆಸುತ್ತಿದ್ದಳು. ಸಾಧನಾ 10 ನೇ ತರಗತಿಯಲ್ಲಿ 92.60% ಅಂಕಗಳನ್ನು ಗಳಿಸಿದ್ದಳು, ಆದರೆ ಇತ್ತೀಚೆಗೆ ನೀಟ್ ಅಭ್ಯಾಸ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದಳು. ಇದು ಅವಳ ತಂದೆ ಧೋಂಡಿರಾಮ್ ಭೋಸಲೆ ಇದರಿಂದ ಸಿಟ್ಟುಗೊಂಡಿದ್ದಾರೆ. ಅಂದ ಹಾಗೆ ಇವರು ಸ್ವತಃ ಶಾಲಾ ಪ್ರಾಂಶುಪಾಲರು.
ಕೋಪದಲ್ಲಿ ತಂದೆ ಅವಳನ್ನು ಕೋಲಿನಿಂದ ಹೊಡೆದಿದ್ದು, ಸಾಧನಾ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಕೆಯನ್ನು ಕುಟುಂಬವು ಸಾಂಗ್ಲಿಯ ಉಷಾಕಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಆರಂಭವಾಗುವ ಮೊದಲೇ ಅವಳು ಸಾವನ್ನಪ್ಪಿದಳು.
ಪೊಲೀಸರ ಪ್ರಕಾರ, ಜೂನ್ 22 ರಂದು ಬಾಲಕಿಯ ತಾಯಿ ದೂರು ನೀಡಿದ್ದು, ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಕ್ಕಾಗಿ ತನ್ನ ಪತಿ ತನ್ನ ಮಗಳಿಗೆ ಹೊಡೆದಿದ್ದರಿಂದ ಆಕೆಯ ಸಾವು ಸಂಭವಿಸಿದೆ ಎಂದು ದೂರು ನೀಡಿದ್ದರು. ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದು, ಪ್ರಸ್ತುತ ಜೂನ್ 24 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪ್ರಕರಣ ಇನ್ನೂ ತನಿಖೆಯಲ್ಲಿದೆ.
ಇದನ್ನೂ ಓದಿ: Karkala: ಕಾರ್ಕಳ:ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ: ಯುವಕನಿಗೆ ತಲವಾರಿನಿಂದ ಹಲ್ಲೆಗೆ ಯತ್ನ!
