Home » Chikkamagaluru: ಮಳೆ ಅವಾಂತರ, ಗುಡ್ಡ ಕುಸಿತ: ಶೃಂಗೇರಿ-ಕಾರ್ಕಳ ರಸ್ತೆ ಸಂಚಾರ ಸ್ಥಗಿತ

Chikkamagaluru: ಮಳೆ ಅವಾಂತರ, ಗುಡ್ಡ ಕುಸಿತ: ಶೃಂಗೇರಿ-ಕಾರ್ಕಳ ರಸ್ತೆ ಸಂಚಾರ ಸ್ಥಗಿತ

by Mallika
0 comments
Mansoon Rain

Chikkamagaluru: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು, ವರುಣಾರ್ಭಟಕ್ಕೆ ಅವಾಂತರ ಸೃಷ್ಟಿಗೊಂಡಿದೆ.

ಭಾರೀ ಮಳೆಯ ಕಾರಣ ಹಲವೆಡೆ ಭೂಕುಸಿತ ಉಂಟಾಗಿದ್ದು, ಶೃಂಗೇರಿಯ ನೆಮ್ಮಾರ್‌ ಬಳಿ ರಸ್ತೆಯ ಮೇಲೆ ಗುಡ್ಡ ಕುಸಿದಿದೆ. ವಾಹನ ಸಂಚಾರ ಬಂದ್‌ ಆಗಿದೆ. ಹೆದ್ದಾರಿಯ ರಸ್ತೆ ಮೇಲೆ ಗುಡ್ಡ ಕುಸಿದ ಪರಿಣಾಮ ಶೃಂಗೇರಿ-ಕಾರ್ಕಳ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಮಣ್ಣು ತೆರವು ಗೊಳಿಸುವ ಕೆಲಸ ಜೆಸಿಬ್‌ ಮೂಲಕ ಮಾಡಲಾಗುತ್ತಿದೆ. ಪೊಲೀಸರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಕೊಪ್ಪ, ಶೃಂಗೇರಿ, ಎನ್‌ಆರ್‌ಪುರ, ಕಳಸ, ಶೃಂಗೇರಿ ತಾಲೂಕುಗಳ ಅಂಗನಾವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ:ED: ಇಂಜಿನಿಯರಿಂಗ್ ಸೀಟ್ ಗಳ ಅಕ್ರಮ ಹಂಚಿಕೆ: 18 ಸ್ಥಳಗಳ ಮೇಲೆ ಇ ಡಿ ದಾಳಿ

You may also like