Company Dress Code:ಸಾಮಾನ್ಯವಾಗಿ ಕಂಪನಿಗಳು ತಮ್ಮ ಎಂಪ್ಲಾಯಿಗಳಿಗಾಗಿ ವಸ್ತ್ರಸಂಹಿತೆಯನ್ನು ಜಾರಿ ಮಾಡಿರುತ್ತವೆ. ಅಂದರೆ ಡ್ರೆಸ್ ಕೋಡ್ ಎಲ್ಲಾ ಕಂಪನಿಗಳಲ್ಲೂ ಇದ್ದೇ ಇರುತ್ತದೆ. ಆದರೆ ಸದ್ಯ ಇಲ್ಲೊಂದು ಆಫೀಸ್‌ನ ಡ್ರೆಸ್ ಕೋಡ್ ಟೀಕೆಗೆ ಗುರಿಯಾಗಿದ್ದು, ಫುಲ್ ವೈರಲ್ ಆಗುತ್ತಿದೆ.
ಹೌದು, ಚೂಡಿದಾರದ ವೇಲ್ ಗಳಿಗೆ ಪಿನ್ ಮಾಡಿರಬೇಕು, ಕುರ್ತಾ ಹಾಕಿದರೆ ವೇಲನ್ನು ಕೂಡ ಹಾಕಬೇಕು, ಇನ್ಶರ್ಟ್ ಮಾಡಬೇಕು ಎಂಬ ಅನೇಕ ರೂಲ್ಸ್ ಗಳನ್ನು ಕೆಲವು ಕಂಪನಿಗಳು ಮಾಡಿರುತ್ತವೆ. ಇದು ಸಾಮಾನ್ಯ ವಿಚಾರ. ಆದರೆ ಇಲ್ಲೊಂದು ಕಂಪೆನಿ ಮಾತ್ರ ಎಲ್ಲಾ ಮಿತಿಯನ್ನ ಮೀರಿದ್ದು, ಮಹಿಳಾ ಉದ್ಯೋಗಿಗಳು ಚೂಡಿದಾರವನ್ನ ಧರಿಸಿ ಬರಬೇಕು, ಅದರಲ್ಲೂ ಅದರ ದುಪ್ಪಟ್ಟವನ್ನ ಪಿನ್ ಮಾಡಿರಬೇಕು ಎಂದ ನಿಯಮ ಮಾಡಿದೆ.
ಇಷ್ಟು ಮಾತ್ರವಲ್ಲದೇ, ಇನ್ನಷ್ಟು ರೂಲ್ಸ್ ಹಾಕಿದೆ. ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಕೂದಲನ್ನ ಬಿಟ್ಟುಕೊಂಡು ಆಫೀಸ್‌ಗೆ ಬರುವ ಹಾಗಿಲ್ಲ. ಯಾವಾಗಲೂ ಕೂದಲನ್ನ ಕಟ್ಟಿಕೊಂಡು ಬರಬೇಕು ಎಂದು ಹೇಳಿದೆ. ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಲಿರುವ ವ್ಯಕ್ತಿಯೊಬ್ಬರ ಫ್ರೆಂಡ್ ಈ ವಿಚಾರವನ್ನ ಶೇರ್ ಮಾಡಿಕೊಂಡಿದ್ದು, ಎಲ್ಲೆಡೆ ಟ್ರೋಲ್ ಆಗುತ್ತಿದೆ. ಕೆಲವರಂತೂ ಇದು ಯಾವ ಸ್ಕೂಲ್ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಅನೇಕ ನಿಟ್ಟಿಗರು ಈ ಕಂಪನಿಯ ರೂಲ್ಸ್ ಕಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
