Home » Kodagu Rain: ಕೊಡಗಿನಲ್ಲಿ ಬಾರಿ ಮಳೆ : ತುಂಬಿ ಹರಿಯುತ್ತಿರುವ ಕಾವೇರಿ – ಜನ ಜೀವನ ಅಸ್ತವ್ಯಸ್ತ

Kodagu Rain: ಕೊಡಗಿನಲ್ಲಿ ಬಾರಿ ಮಳೆ : ತುಂಬಿ ಹರಿಯುತ್ತಿರುವ ಕಾವೇರಿ – ಜನ ಜೀವನ ಅಸ್ತವ್ಯಸ್ತ

0 comments

Kodagu Rain: ಕೊಡಗಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ವರುಣ ಅಬ್ಬರಿಸುತ್ತಿದ್ದಾನೆ. ವಾಡಿಕೆಗಿಂತ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಮಳೆಗೆ ಕೆಲವೊಂದು ಆವಾಂತರ ಸೃಷ್ಟಿಗೊಂಡಿದ್ದು ಜನರ ದೈನಂದಿನ ಜೀವನಕ್ಕೆ ಧಕ್ಕೆಯಾಗುತ್ತಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಮೂರ್ನಾಡು ಸಮೀಪದ ಬಲಮುರಿಯ ಪ್ರಸಿದ್ಧ ಅಗಸ್ಟೇಶ್ವರ ದೇವಾಲಯದ ತಡೆಗೋಡೆಯವರಿಗೆ ಕಾವೇರಿ ಹೊಳೆ ತುಂಬಿ ಹರಿಯುತ್ತಿದೆ. ಇಲ್ಲಿನ ಅಂಚೆ ಕಚೇರಿಯ ಕಟ್ಟಡದ ಮೆಟ್ಟಿಲು ವರೆಗೆ ನೀರು ನಿಂತಿದ್ದು ಪಕ್ಕದ ರಸ್ತೆ ಜಲಾವೃತಗೊಂಡಿದೆ. ಕಳೆದ ಹತ್ತು ದಿನಗಳ ಹಿಂದೆ ಸುರಿದ ಮಳೆಗೆ ಇಲ್ಲಿನ ಕೆಳಗಿನ ಸೇತುವೆ ಮುಳುಗಡೆ ಗೊಂಡಿತ್ತು. ಇದೀಗ ನೀರಿನ ಪ್ರಮಾಣ ಹೆಚ್ಚಾಗಿದ್ದು ಹೊಳೆಯ ದಂಡೆಯ ಸಮೀಪ ವಾಸಿಸುತ್ತಿರುವವರಿಗೆ ಇದೀಗ ಆತಂಕ ಎದುರಾಗಿದೆ. ದೇವಾಲಯದ ಮುಂಭಾಗದ ಅಶ್ವತಕಟ್ಟೆವರೆಗೆ ಕಾವೇರಿ ಹೊಳೆ ತುಂಬಿ ಹರಿಯುತ್ತಿದೆ.

ಇನ್ನು ಗೋಣಿಕೊಪ್ಪಲಿನ ಒಂದನೇ ವಿಭಾಗದಲ್ಲಿ ನಿನ್ನೆ ತಡರಾತ್ರಿ ಕುನ್ನಯ್ಯ ಎಂಬುವರ ಜಾಗದಲ್ಲಿದ್ದ ಬಾರಿ ದೊಡ್ಡ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಮರ ಬಿದ್ದಿರುವ ಜಾಗದ ಸಮೀಪವೇ ಮನೆಗಳಿದ್ದು, ಅದೃಷ್ಟವಸಾತ್ ಬಾರಿ ಅನಾಹುತ ತಪ್ಪಿದಂತಾಗಿದೆ. ವಿದ್ಯುತ್ ತಂತಿಗಳು ತುಂಡಾಗಿವೆ. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಹಾಗೂ ಚೆಸ್ಕಾಂ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ: Tamil Actor Krishna: ಡ್ರಗ್‌ ಪ್ರಕರಣ: ಇನ್ನೋರ್ವ ಖ್ಯಾತ ನಟ ಬಂಧನ

You may also like