Home » Pavan Kalyan: ಕ್ಯಾಬಿನೆಟ್ ಮೀಟಿಂಗ್ ಬಿಟ್ಟು ಅಣ್ಣನ ಮನೆಗೆ ಅವಸರವಾಗಿ ಓಡಿದ ಪವನ್ ಕಲ್ಯಾಣ್- ಮೆಗಾಸ್ಟಾರ್ ಮನೆಯಲ್ಲಿ ಆಗಿದ್ದೇನು?

Pavan Kalyan: ಕ್ಯಾಬಿನೆಟ್ ಮೀಟಿಂಗ್ ಬಿಟ್ಟು ಅಣ್ಣನ ಮನೆಗೆ ಅವಸರವಾಗಿ ಓಡಿದ ಪವನ್ ಕಲ್ಯಾಣ್- ಮೆಗಾಸ್ಟಾರ್ ಮನೆಯಲ್ಲಿ ಆಗಿದ್ದೇನು?

by V R
0 comments

Pavan Kalyan : ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆದ ಪವನ್ ಕಲ್ಯಾಣ್ ಅವರು ಕ್ಯಾಬಿನೆಟ್ ಮೀಟಿಂಗ್ ಅನ್ನು ಬಿಟ್ಟು ಅವಸರ ಅವಸರವಾಗಿ ಅಣ್ಣನ ಮನೆಗೆ ಓಡಿ ಹೋದಂತಹ ಘಟನೆ ನಡೆದಿದೆ. ಹಾಗಿದ್ದರೆ ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ನಡೆದಿದ್ದಾದರೂ ಏನು?

ಹೌದು, ನಟ ಪವನ್‌ ಕಲ್ಯಾಣ್‌ ಅವರು ಇಂದು ಸರ್ಕಾರದ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ಅದನ್ನ ಬಿಟ್ಟು ಲಗುಬಗೆಯಿಂದ ತಮ್ಮ ಸಹೋದರ ಚಿರಂಜೀವಿ ಅವರ ಮನೆಗೆ ಹೋಗಿದ್ದಾರೆ. ಅವರು ಸ್ವಲ್ಪ ಆತಂಕದಲ್ಲಿ ಇದ್ದಂತೆ ಕಾಣುತ್ತಿದ್ದರು. ಫುಲ್‌ ಪೊಲೀಸ್‌ ಸೆಕ್ಯೂರಿಟಿ ಮಧ್ಯೆ ನಟ ಚಿರಂಜೀವಿ ಮನೆಗೆ ಅವರು ಹೋಗಿರುವ ವಿಡಿಯೊಗಳು ವೈರಲ್‌ ಆಗುತ್ತಿವೆ.

ಪವನ್‌ ಕಲ್ಯಾಣ್‌ ಅವರು ಕ್ಯಾಬಿನೆಟ್‌ ಮೀಟಿಂಗ್‌ ಬಿಟ್ಟು ಅಷ್ಟು ಅವಸರಲ್ಲಿ ತಮ್ಮ ಅಣ್ಣನ ಮನೆಗೆ ಹೋಗೋಕೆ ಕಾರಣ ಅವರ ತಾಯಿಯ ಹದಗೆಟ್ಟ ಆರೋಗ್ಯ ಎಂದು ಹೇಳಲಾಗಿದೆ. ಪವನ್‌ ಕಲ್ಯಾಣ್‌ ತಾಯಿ ಅಂಜನಾ ದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಸುದ್ದಿ ಹರಿದಾಡಲು ಶುರುವಾದ ಕೆಲವು ಹೊತ್ತುಗಳ ಬಳಿಕ ನಾಗ ಬಾಬು ಅವರು ಟ್ವೀಟ್‌ ಮಾಡಿ ʼಅಂಥದ್ದೇನೂ ಆಗಿಲ್ಲ. ನಮ್ಮ ತಾಯಿ ಆರೋಗ್ಯವಾಗಿಯೇ ಇದ್ದಾರೆʼ ಎಂದರು. ಹೀಗಾಗಿ ಪವನ್‌ ಕಲ್ಯಾಣ್‌ ಅಷ್ಟು ಲಗುಬಗೆಯಿಂದ ಅಲ್ಲಿಗೆ ಹೋಗಿದ್ದೇಕೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ;Youths death: ಭಾರತದಲ್ಲಿ ಹೆಚ್ಚುತ್ತಿರುವ ಯುವಕರ ಸಾವು! ಸಾವಿಗೆ ಪ್ರಮುಖ ಕಾರಣ ಏನು ಗೊತ್ತಾ?

You may also like