Home » Kabini Dam: ಕಬಿನಿ ಜಲಾಶಯದಿಂದ 25,000 ಕ್ಯುಸೆಕ್‌ ನೀರು ಬಿಡುಗಡೆ – ಮತ್ತಷ್ಟು ನೀರು ನದಿಗೆ ಹರಿಸುವ ಸಾಧ್ಯತೆ

Kabini Dam: ಕಬಿನಿ ಜಲಾಶಯದಿಂದ 25,000 ಕ್ಯುಸೆಕ್‌ ನೀರು ಬಿಡುಗಡೆ – ಮತ್ತಷ್ಟು ನೀರು ನದಿಗೆ ಹರಿಸುವ ಸಾಧ್ಯತೆ

0 comments

Kabini Dam: ವಯನಾಡಿನಲ್ಲಿ ಮಳೆ ಹೆಚ್ಚಾದ ಪರಿಣಾಮ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಒಳಹರಿವು ಏರಿಕೆಯಾಗಿದ್ದು, ಹೀಗಾಗಿ 25,000 ಕ್ಯುಸೆಕ್ ನೀರನ್ನು ಹೊರ ಬಿಡಲಾಗಿದೆ. 2,284 ಅಡಿಗಳ ಸಾಮರ್ಥ್ಯ ಹೊಂದಿರುವ ಕಬಿನಿಯಲ್ಲಿ ಗುರುವಾರ 2,278.90 ಅಡಿಯಷ್ಟು ನೀರು ಸಂಗ್ರಹವಾಗಿದೆ.

19.52 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 16.41 ಟಿಎಂಸಿ ನೀರು ಸಂಗ್ರಹವಾಗಿದೆ. ಮತ್ತಷ್ಟು ನೀರನ್ನು ನದಿಗೆ ಹರಿಸುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿರುವ ಜನರು ಜಾನುವಾರುಗಳನ್ನು, ಆಸ್ತಿ- ಪಾಸ್ತಿ ರಕ್ಷಣೆ ಮಾಡಿಕೊಂಡು, ಬೇರೆಡೆಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮ ಸೂಚಿಸಿದೆ.

ಇದನ್ನೂ ಓದಿ;BC Road: ಕಲ್ಲಡ್ಕ ಫ್ಲೈಓವರ್‌ ನ ಎರಡೂ ಬದಿಯೂ ಸಂಚಾರಕ್ಕೆ ಮುಕ್ತ  

You may also like