Home » Canara Bank: ಕೆನರಾ ಬ್ಯಾಂಕ್‌ ದರೋಡೆ ಪ್ರಕರಣ: ಮ್ಯಾನೇಜರ್‌ನಿಂದಲೇ ಬ್ಯಾಂಕ್‌ ದರೋಡೆ: ಮೂವರು ಅರೆಸ್ಟ್

Canara Bank: ಕೆನರಾ ಬ್ಯಾಂಕ್‌ ದರೋಡೆ ಪ್ರಕರಣ: ಮ್ಯಾನೇಜರ್‌ನಿಂದಲೇ ಬ್ಯಾಂಕ್‌ ದರೋಡೆ: ಮೂವರು ಅರೆಸ್ಟ್

0 comments

Canara Bank: ವಿಜಯಪುರ ಜಿಲ್ಲೆಯ ಮನಗೂಳೀ ಕೆನರಾಬ್ಯಾಂಕ್‌ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಮನಗೂಳಿ ಕೆನರಾ ಬ್ಯಾಂಕ್‌ ಹಿಂದಿನ ವ್ಯವಸ್ಥಾಪಕ ಹಾಗೂ ಹಾಲಿ ಹುಬ್ಬಳ್ಳಿಯ ಗದಗ ರೋಡ್‌ನ ಕೊಠಾರಿ ನಗರದ ಕೆನರಾ ಬ್ಯಾಂಕ್‌ ಹಿರಿಯ ವ್ಯವಸ್ಥಾಪಕ ವಿಜಯ್‌ ಕುಮಾರ್‌ ಮಿರಿಯಾಲ (41) ಹುಬ್ಬಳ್ಳಿಯ ಜನತಾ ಕಾಲೋನಿ ಉದ್ಯೋಗಿ ಚಂದ್ರಶೇಖರ್‌ ನೆರೆಲ್ಲಾ (38) ಹುಬ್ಬಳ್ಳಿ ಚಾಲುಕ್ಯ ನಗರದ ಸುನೀಲ್‌ ಮೋಕಾ (40) ಎಂಬುವವರನ್ನು ಬಂಧನ ಮಾಡಲಾಗಿದೆ.

ಬಂಧಿತರಿಂದ 10.75 ಕೋಟಿ ಮೌಲ್ಯದ 10.5 ಕೆಜಿ ಚಿನ್ನಾಭರಣ, ಬಂಗಾರದ ಗಟ್ಟಿ, ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆದಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

You may also like