4
Kerala: ಇಂದು ಬೆಳಗಿನ ಜಾವ ಕೇರಳದ ಕೊಡಕರದಲ್ಲಿ ಕಾರ್ಮಿಕರು ಕೆಲಸಕ್ಕೆ ಎಂದು ತಯಾರಾಗುತ್ತಿದ್ದ ಕಟ್ಟಡ ಕುಸಿದು, ಮೂರು ಜನ ಸಾವನ್ನಪ್ಪಿದ್ದು 14 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುಮಾರು 40 ವರ್ಷದ ಹಳೆಯ ಕಟ್ಟಡವಾಗಿದ್ದು ಎಂದಿನಂತೆ ಕಾರ್ಮಿಕರು ಕೆಲಸಕ್ಕೆ ತಯಾರಾಗುತ್ತಿದ್ದಂತಹ ಸಮಯವಾಗಿತ್ತು. ಮೂರ ಪೈಕಿ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು, ಮೂರನೇ ವ್ಯಕ್ತಿಯು ಚಪ್ಪಡಿಗಳ ಅಡಿಯಲ್ಲಿ ಬಿದ್ದಿದ್ದರಿಂದ ಆತನನ್ನು ಹೊರಗೆ ಅಳಿಯಲು ಕಷ್ಟವಾಯಿತು ಹಾಗೂ ಹೆಚ್ಚಿನ ಸಮಯ ಹಿಡಿಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೂ ಪೊಲೀಸರು ಇದೀಗ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ;Bengaluru: ಐಪಿಎಸ್ ಅಧಿಕಾರಿ ದಯಾನಂದ ಗುರುವಾರ ವಿಚಾರಣೆಗೆ ಹಾಜರು
