Home » Shivamogga: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಸಿಮ್ಸ್‌ ಕಾಲೇಜು ಪ್ರೊಫೆಸರ್‌ ಬಂಧನ

Shivamogga: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಸಿಮ್ಸ್‌ ಕಾಲೇಜು ಪ್ರೊಫೆಸರ್‌ ಬಂಧನ

by Mallika
0 comments

Shivamogga: ಶಿವಮೊಗ್ಗದ ಸಿಮ್ಸ್‌ ಕಾಲೇಜು ಪ್ರೊಫೆಸರ್‌ ವಿರುದ್ಧ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಪ್ರೊಫೆಸರ್‌ ಬಂಧನಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು.

ಪ್ರತಿಭಟನೆಯ ತೀವ್ರತೆ ಹೆಚ್ಚಿದ್ದರಿಂದ ಪ್ರೊಫೆಸರ್‌ ಡಾ.ಅಶ್ವಿನ್‌ ಹೆಬ್ಬಾರ್‌ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.

ಸಿಮ್ಸ್‌ ಕಾಲೇಜು ಪ್ರೊಫೆಸರ್‌ ಡಾ.ಅಶ್ವಿನ್‌ ಹೆಬ್ಬಾರ್‌ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಕುರಿತು ಶಿವಮೊಗ್ಗದ ಮಹಿಳಾ ಠಾಣೆಗೆ ಸಂತ್ರಸ್ತೆ ದೂರನ್ನು ನೀಡಿದ್ದರು. ಪ್ರೊಫೆಸರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣ ದಾಖಲಾಗುವುದು ಗೊತ್ತಾಗುತ್ತಿದ್ದಂತೆ ಇತ್ತ ಕಡೆ ಪ್ರೊಫೆಸರ್‌ ಡಾ.ಅಶ್ವಿನ್‌ ಹೆಬ್ಬಾರ್‌ ನಾಪತ್ತೆಯಾಗಿದ್ದರು. ಪ್ರೊಫೆಸರನ್ನು ಬಂಧಿಸುವನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ತರಗತಿಗಳನ್ನು ಬಹಿಷ್ಕರಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಕಾಲೇಜು ಬಳಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ ;Tiger Death: 5 ಹುಲಿ ಕಳೆಬರ ದೊರಕಿದ ಕೇಸ್‌ಗೆ ಬಿಗ್‌ ಟ್ವಿಸ್ಟ್‌

You may also like