Home » Robbery: ಬೆಂಗಳೂರಿನಲ್ಲಿ ಹಾಡಹಗಲೇ 2 ಕೋಟಿ ಹಣ ದರೋಡೆ: ರುಪಾಯಿಯನ್ನು ಡಾಲರ್‌ಗೆ ಎಕ್ಸ್‌ಜೇಂಜ್‌ ಮಾಡಲು ಬಂದಾಗ ರಾಬರಿ

Robbery: ಬೆಂಗಳೂರಿನಲ್ಲಿ ಹಾಡಹಗಲೇ 2 ಕೋಟಿ ಹಣ ದರೋಡೆ: ರುಪಾಯಿಯನ್ನು ಡಾಲರ್‌ಗೆ ಎಕ್ಸ್‌ಜೇಂಜ್‌ ಮಾಡಲು ಬಂದಾಗ ರಾಬರಿ

by Mallika
0 comments

Robbery: ಬೆಂಗಳೂರಿನಲ್ಲಿ ಹಾಡಹಗಲೇ 2 ಕೋಟಿ ಹಣ ದರೋಡೆ ಮಾಡಲಾಗಿದೆ. ಡಾಲರ್‌ ಎಕ್ಸ್‌ಚೇಂಜ್‌ ಎಂದು ಎರಡು ಕೋಟಿ ಹಿಡಿದು ಬಂದವನ ಕುತ್ತಿಗೆಯ ಮೇಲೆ ಚಾಕು ಇಟ್ಟು ರಾಬರಿ ಮಾಡಲಾಗಿದೆ.

ಎಂಜಿನಿಯರ್‌ ಒಬ್ಬ ಜರ್ಮಿನಿಯಿಂದ ಮೆಷಿನ್‌ ತರಿಸಿಕೊಳ್ಳಲು ರುಪಾಯಿಯನ್ನು ಡಾಲರ್‌ಗೆ ಎಕ್ಸ್‌ಜೇಂಜ್‌ ಮಾಡಲು ಬಂದಿದ್ದು, ಈ ಸಂದರ್ಭ ಎರಡು ಕೋಟಿ ಎಗರಿಸಿ ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಎಂಸ್‌ ಪಾಳ್ಯದ ಎಕೆ ಎಂಟರ್‌ಪ್ರೈಸಸ್‌ನಲ್ಲಿ ನಡೆದಿದೆ.

ಕೆಂಗೇರಿಯ ಶ್ರೀಹರ್ಷ, ಕೋಲ್ಡ್‌ ಪ್ರೆಸ್ಸಡ್‌ ಆಯಿಲ್‌ ಉದ್ಯಮವನ್ನು ಆರಂಭಿಸಲೆಂದು ಸ್ನೇಹಿತರ ಬಳಿ ಎರಡು ಕೋಟಿ ಹೊಂದಿಸಿಕೊಂಡು ಜರ್ಮನಿಯಿಂದ ಮೆಷಿನ್‌ ತರಿಸುವ ಯೋಜನೆ ಮಾಡಿದ್ದರು. ಎರಡು ಕೋಟಿ ಹಣವನ್ನು usdt ಕರೆನ್ಸಿಗೆ ಪರವರ್ತನೆ ಮಾಡಲೆಂದು ಇದಕ್ಕಾಗಿ ಸ್ನೇಹಿತರ ಮೂಲಕ ಬೆಂಜಮಿನ್‌ ಹರ್ಷ ಎನ್ನುವ ಪರಿಚಯವಾಗುತ್ತದೆ. ವಿದ್ಯಾರಣ್ಯಪುರದ ಎಂಎಸ್‌ ಪಾಳ್ಯ ಸರ್ಕಲ್‌ ಬಳಿ ಬರುವಂತೆ ಹೇಳಿದ್ದಾರೆ ಬೆಂಜಮಿನ್‌.

ಜೂ 25 ರಂದು ಸ್ನೇಹಿತರಾದ ನಾಗೇಂದ್ರ, ಶಾಂತಕುಮಾರ್‌ ಜೊತೆ ಶ್ರೀ ಹರ್ಷ ಹಣ ತೆಗೆದುಕೊಂಡು ಹೋಗಿದ್ದು, ಎರಡು ಕೋಟಿ ಹಣವನ್ನು ಬೆಂಜಮಿನ್‌ ಮತ್ತು ಅವರ ಜೊತೆಯಲ್ಲಿದ್ದ ಇನ್ನಿಬ್ಬರು ನಗದು ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಏಕಾಏಕಿ 6 ರಿಂದ 7 ಜನರ ಗುಂಪು ಒಳಗೆ ನುಗ್ಗಿದೆ. ಚಾಕು ತೋರಿಸಿ 2 ಕೋಟಿ ನಗದು ಹಣ, ನಾಲ್ಕು ಮೊಬೈಲ್‌ಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.

ಎಕೆ ಎಂಟರ್‌ಪ್ರೈಸಸ್‌ ಕಚೇರಿಯಿಂದ ಹೊರ ಬರ್ತಿದ್ದಂತೆ ಬೆಂಜಮಿನ್‌ ಹಾಗೂ ಆತನ ಸ್ನೇಹಿತರು ಕೂಡಾ ಓಡಿ ಹೋಗಿದ್ದಾರೆ. ಕೂಡಲೇ ಹರ್ಷ ಅನುಮಾನಗೊಂಡು ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಪೊಲೀಸರು ಬೆಂಜಮಿನ್‌ ಮತ್ತು ಆತನ ಇಬ್ಬರು ಸ್ನೇಹಿತರನ್ನು ಹಿಡಿದು ವಿಚಾರಣೆ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಹರ್ಷ ತನ್ನ ಗ್ಯಾಂಗ್‌ ಜೊತೆ ಸೇರಿ 2 ಕೋಟಿ ಹಣ ಲಪಟಾಯಿಸುವ ಉದ್ದೇಶದಿಂದ ಪ್ಲ್ಯಾನ್‌ ಮಾಡಿರುವ ಶಂಕೆ ವ್ಯಕ್ತಗೊಂಡಿದೆ. ಹರ್ಷನಿಗೆ ಹಣ ಹೇಗೆ ಕಲೆಕ್ಟ್‌ ಆಗಿದೆ ಈ ಕುರಿತು ಕೂಡಾ ತನಿಖೆ ಮಾಡಲಾಗುತ್ತಿದೆ.

ಸಿಸಿಟಿವಿ ಡಿವಿಆರ್‌ ವಶಕ್ಕೆ ಪಡೆಯಲಾಗಿದ್ದು, ಹಣ ತೆಗೆದುಕೊಂಡು ಪರಾರಿಯಾಗಿರುವ ಗ್ಯಾಂಗ್‌ನ ಪತ್ತೆಗೆ ವಿದ್ಯಾರಣ್ಯಪುರ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ;KEB: ವಿದ್ಯುತ್ ಅವಘಡಗಳನ್ನು ತಪ್ಪಿಸಲು ವಿಶೇಷ ಮಾರ್ಗಸೂಚಿ

You may also like