Davanagere: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಮಹಿಳೆಯೊಬ್ಬಳ ಜೊತೆ ಪರಾರಿಯಾಗಿರುವ ಘಟನೆ ಎಂದು ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ, ಚನ್ನಗಿರಿ ತಾಲೂಕಿನ ಮರವಂಜಿಯ ಗಣೇಶ್ (25) ಈ ರೀತಿ ಮಾಡಿದ್ದಾನೆ.
13 ವರ್ಷದ ಹಿಂದೆ ಮುದ್ದೇನಹಳ್ಳಿಯ ನಾಗರಾಜ್ ಎಂಬುವವರು ಶಾಂತ ಎಂಬುವರನ್ನು ಎರಡನೇ ಮದುವೆಯಾಗಿದ್ದು, ನಾಗರಾಜ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಓರ್ವ ಮಗ ಇರುತ್ತಾನೆ. ಹಾಗೂ ನಾಗರಾಜ್ ಜೊತೆ ಅವರ ಹಿರಿಯ ಮಗಳು ಹೇಮಾ ವಾಸವಿರುತ್ತಾಳೆ.
ಇನ್ನು ಎರಡು ವರ್ಷಗಳ ಹಿಂದೆ ಗಣೇಶನನ್ನು ಮನೆಗೆ ಕರೆದುಕೊಂಡು ಬಂದಿದ್ದ ಶಾಂತ ಆತನನ್ನು ಹೇಮಾಳಿಗೆ ಮದುವೆ ಮಾಡೋಣ ಮನೆಯ ಅಳಿಯನಾಗಿ ಇಟ್ಟುಕೊಳ್ಳೋಣ ಎಂದಿರುತ್ತಾಳೆ. ಈ ರೀತಿಯಾಗಿ ಹೇಮ ಹಾಗೂ ಗಣೇಶ್ ಮದುವೆಯಾಗಿರುತ್ತದೆ.
ಇದೀಗ ಗಣೇಶ್ ಶಾಂತ (55) ಒಟ್ಟಿಗೆ ಓಡಿ ಹೋಗಿದ್ದು, ಇವರಿಬ್ಬರಿಗೂ ಮದುವೆಗೂ ಮುನ್ನವೇ ಅಕ್ರಮ ಸಂಬಂಧ ಇತ್ತು ಎನ್ನಲಾಗುತ್ತಿದೆ. ಹೇಮಾಳನ್ನು ಬಸ್ಟಾಂಡ್ ನಲ್ಲಿ ಬಿಟ್ಟು ಇಬ್ಬರು ಎಸ್ಕೇಪ್ ಆಗಿದ್ದು ಸಂತ್ರಸ್ತೇ ಕಣ್ಣೀರಿಟ್ಟಿದ್ದಾಳೆ.
