5
KMCH: ನೆಫ್ರಾಲಜಿ ಸ್ಪೆಷಲೈಸೇಷನ್‌ಗೆ ಸ್ಪರ್ಧಾತ್ಮಕವಾದ NEET-SS ಪರೀಕ್ಷೆಯಲ್ಲಿ ಪಾಸಾಗಿರುವ ಕಾಶ್ಮೀರದ ವೈದ್ಯ ಜುಬೈರ್ ಅಹ್ಮದ್ ತಮಿಳುನಾಡಿನ ಕೊಯಮತ್ತೂರಿನ ಕೊವಾಯ್ ಕೊವಾಯ್ ಮೆಡಿಕಲ್ ಸೆಂಟರ್ ಆಂಡ್ ಹಾಸ್ಪಿಟಲ್‌ನಲ್ಲಿ ಕೌನ್ಸಲಿಂಗ್ ಸಮಯದಲ್ಲಿ ಕಾಲೇಜಿಗೆ ಸೇರಿಸಿಕೊಳ್ಳಲು ನಿರಾಕರಣೆ ಮಾಡಲಾಗಿದೆ.
ಮೆಡಿಕಲ್ ಕಾಲೇಜಿನ ಡ್ರೆಸ್‌ಕೋಡ್ ಉಲ್ಲಂಘನೆಯನ್ನು ಉಲ್ಲೇಖಿಸಿ ಕಾಲೇಜು ಅಧಿಕಾರಿಗಳು ಗಡ್ಡ ತೆಗೆಯದ ಹೊರತು ಕಾಲೇಜಿಗೆ ಪ್ರವೇಶವಿಲ್ಲ ಎಂದಿದ್ದಾರೆ. ಗಡ್ಡ ಬೋಳಿಸುವೆ ಎಂದು ಅಹ್ಮದ್ ಹೇಳಿದರೂ ತಮಿಳುನಾಡಿನ ಆಸ್ಪತ್ರೆ ಆಡಳಿತ ಸೀಟು ನೀಡಲು ನಿರಾಕರಣೆ ಮಾಡಿತು.
ಇದೀಗ ಕಾಶ್ಮೀರದ ವಿದ್ಯಾರ್ಥಿ ಸಂಘವು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಮನವಿ ಸಲ್ಲಿಸಿದೆ. ಶಿಕ್ಷಣ ಸಂಸ್ಥೆಗಳು ಮೂಲಭೂತ ಹಕ್ಕುಗಳೊಂದಿಗೆ ಸಂಘರ್ಷಿಸುವ ಡ್ರೆಸ್ ಕೋಡ್‌ಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಹೇಳಿದೆ.
ಇದನ್ನೂ ಓದಿ;Blood pressure: ರಕ್ತದೊತ್ತಡಕ್ಕೆ ಈ ಪಾನೀಯಗಳು ಉತ್ತಮ ಮನೆ ಮದ್ದು
