Channagiri: 25 ರ ಅಳಿಯನ ಜೊತೆ ಎಸ್ಕೇಪ್ ಆಗಿದ್ದ ಅತ್ತೆ 15 ದಿನಗಳ ನಂತರ ಗಂಡನ ಮನೆಗೆ ವಾಪಾಸು ಬಂದಿದ್ದು, ಪತಿ ಮತ್ತು ಮಗಳ ಜೊತೆ ಹೈಡ್ರಾಮ ಮಾಡಿದ ಘಟನೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಹಿಳೆ ತನ್ನ ಅಳಿಯನ ಜೊತೆಗೆ ಕೆಲ ದಿನಗಳ ಹಿಂದೆ ಪರಾರಿಯಾಗಿದ್ದಳು. ಈಗ ಗಂಡನ ಮನೆಗೆ ವಾಪಾಸು ಬಂದು ನಾನು ಅಳಿಯನ ಜೊತೆ ಹೋಗಿರಲಿಲ್ಲ ಎಂದು ಗಲಾಟೆ ಮಾಡಿದ್ದಾಳೆ.
ರಮೇಶ್ (ಹೆಸರು ಬದಲಾವಣೆ ಮಾಡಲಾಗಿದೆ) ಎನ್ನುವವರ ಎರಡನೇ ಪತ್ನಿ, ಹಾಗೂ ಮೊದಲ ಪತ್ನಿಯ ಮಗಳೊಂದಿಗೆ ಮುದ್ದೇನಹಳ್ಳಿಯಲ್ಲಿ ವಾಸವಿದ್ದರು. ರಮೇಶ್ ತಮ್ಮ ಮಗಳ ಮದುವೆಯನ್ನು ಇತ್ತೀಚೆಗೆ ತನ್ನ ಸಹೋದರಿಯ ಮಗನ ಜೊತೆ ಮಾಡಿದ್ದರು. ಆದರೆ ಮದುವೆಯಾದ 15 ದಿನದಲ್ಲಿ ಅತ್ತೆ ಮತ್ತು ಅಳಿಯನ ನಡುವಿನ ಅಕ್ರಮ ಸಂಬಂಧ ಹೊರಬಿತ್ತು.
ಮೊಬೈಲ್‌ನಲ್ಲಿರುವ ಅಶ್ಲೀಲ ಮೆಸೆಜ್‌ಗಳಿಂದ ಈ ವಿಷಯ ಹೊರಬಂದಿತ್ತು. ವಿಚಾರ ಗೊತ್ತಾಗುತ್ತಿದ್ದಂತೆ ಹಣ ಹಾಗೂ ಆಭರಣ ಕದ್ದ ಅತ್ತೆ ಅಳಿಯನ ಜೊತೆ ಪರಾರಿಯಾಗಿದ್ದಾಳೆ. ಈಗ ಈಕೆ ವಾಪಾಸು ಬಂದಿದ್ದು, ಅಳಿಯ ಬಂದಿಲ್ಲ.
ತಮ್ಮ ಮಗ ನಾಪತ್ತೆ ಪ್ರಕರಣ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪೋಷಕರು ನೀಡಿದ್ದಾರೆ.
