Viral Video : ಉತ್ತರ ಪ್ರದೇಶದಲ್ಲಿ ವಿಚಿತ್ರ ವಿದ್ಯಮಾನವನವೊಂದು ಬೆಳಕಿಗೆ ಬಂದಿದ್ದು ಆಕಾಶದಿಂದ ಮೋಡದ ತುಂಡೊಂದು ಹೊಲಕ್ಕೆ ಬಿದ್ದಂತಹ ಅಪರೂಪದ ಘಟನೆ ನಡೆದಿದೆ. ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಕಟ್ಕಾ ಗ್ರಾಮದ ವಿಚಿತ್ರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಬಿಳಿ, ಹತ್ತಿಯಂತಹ ಆಕೃತಿ ನಿಧಾನವಾಗಿ ಆಕಾಶದಿಂದ ಬಿದ್ದು ಹೊಲದಲ್ಲಿ ಇಳಿಯುತ್ತದೆ. ವೈರಲ್ ಆದ ವಿಡಿಯೋದಲ್ಲಿ ಇದನ್ನು ಕಾಣಬಹುದು.
ಅಂದಹಾಗೆ ಜೂನ್ 24 ರಂದು, ಗ್ರಾಮದ ಕೆಲವು ಯುವಕರು ವೀಡಿಯೊವನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ಬಿಳಿ ಮೋಡದಂತಹ ಏನೋ ಗಾಳಿಯಲ್ಲಿ ತೇಲುತ್ತಿರುವುದನ್ನು ನೋಡಲಾಯಿತು. ಅದು ನಿಖರವಾಗಿ ಮೋಡದಂತೆ ಕಾಣುತ್ತಿತ್ತು. ಅದು ನೆಲದ ಮೇಲೆ ಬಿದ್ದ ತಕ್ಷಣ, ಗ್ರಾಮಸ್ಥರು ಕುತೂಹಲದಿಂದ ಅದನ್ನು ಅನ್ವೇಷಿಸಲು ಓಡಿಹೋದರು.
ಇನ್ನು ವಸ್ತುವನ್ನು ಗುರುತಿಸಿದ ಗ್ರಾಮಸ್ಥರು, ಈ ‘ಮೋಡ’ ವಾಸ್ತವವಾಗಿ ಹತ್ತಿರದ ನದಿಯಲ್ಲಿ ಹೆಪ್ಪುಗಟ್ಟಿದ ಫೋಮ್ ತುಂಡು ಎಂದು ಸ್ಪಷ್ಟಪಡಿಸಿದರು, ಅದು ಗಾಳಿಯಲ್ಲಿ ಹಾರಿ ಹೊಲಗಳಲ್ಲಿ ಬಿದ್ದಿತು. ಆಕಾರ ಮತ್ತು ಬಣ್ಣವು ಜನರನ್ನು ಗೊಂದಲಕ್ಕೀಡು ಮಾಡಿದ ಕಾರಣ ಜನರು ಇದನ್ನು ಮೋಡ ಎಂದು ಅಂದುಕೊಂಡರು.
https://x.com/gbudhathoki/status/1938063296156078409?t=p9I42Re1oIxNwBMtjh2n5A&s=19
ಇದನ್ನೂ ಓದಿ: Kodagu: ಅರೆಭಾಷೆ ಕಥೆ, ಅಜ್ಜಿ ಕಥೆ, ಲೇಖನ, ಸಾಹಿತ್ಯ, ಲಲಿತ ಪ್ರಬಂಧ, ಕೃತಿಗಳ ಆಹ್ವಾನ!
