Madenuru Manu: ಮಡೆನೂರು ಮನು ಅವರ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದ ಕಾರಣ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಇದೀಗ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ಮೊದಲು ಅವರು ಸ್ಟಾರ್ ಹೀರೋಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಆಡಿಯೋನ ಈ ಸಂದರ್ಭದಲ್ಲಿ ವೈರಲ್ ಮಾಡಲಾಗಿತ್ತು. ಆರಂಭದಲ್ಲಿ ಇದು ನನ್ನ ಆಡಿಯೋ ಅಲ್ಲ ಎಂದು ವಾದಿಸುತ್ತಿದ್ದ ಮನು ಅವರು ಈಗ ಮನು ಅದು ತಮ್ಮದೇ ಆಡಿಯೋ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಇದೀಗ ಪ್ರತಿಯೊಬ್ಬ ನಾಯಕ ನಟರ ಬಳಿಯು ತೆರಳಿ ಅವರ ಕ್ಷಮೆ ಕೇಳುತ್ತಿದ್ದಾರೆ.
ಇತ್ತೀಚಿಗಷ್ಟೇ ದ್ರುವ ಸರ್ಜಾ ಅವರಿಗೆ ಫೋನಿನ ಮೂಲಕ ಕ್ಷಮೆ ಕೇಳಿದ್ದ ಮಡೆನೂರು ಮನು ಅವರು ಮೊನ್ನೆ ತಾನೆ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ರಾಜ್ಯ ಒಕ್ಕೂಟದ ಅಧ್ಯಕ್ಷರ ಬಳಿ ತೆರಳಿ ವಿಡಿಯೋ ಮೂಲಕ ಕ್ಷಮೆಯಾಚಿಸಿದರು. ಇದೀಗ ಶಿವರಾಜ್ ಕುಮಾರ್ ಅವರ ಕ್ಷಮೆ ಕೇಳಲು ಮಡೆನೂರು ಮನು ಅವರು ಶಿವಣ್ಣನ ಮನೆಗೆ ತೆರಳಿದ್ದರು. ಆದರೆ ಶಿವಣ್ಣ ಅವರನ್ನು ಮನೆಯೊಳಗೆ ಬಿಟ್ಟುಕೊಳ್ಳದೆ ವಾಪಸ್ ಕಳುಹಿಸಿದ್ದಾರೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗಿತ್ತು. ಈ ವಿಚಾರಕ್ಕೆ ಇದೀಗ ಸ್ವತಹ ಮಾಡೇನೂರು ಮನು ಅವರೇ ಸ್ಪಷ್ಟೀಕರಣ ನೀಡಿದ್ದಾರೆ.
ಈ ಬಗ್ಗೆ ಮನು ಮಾತನಾಡಿದ್ದು, ಇದು ಹಳೆಯ ವಿಡಿಯೋ ಎಂದಿದ್ದಾರೆ. ಶಿವರಾಜ್ಕುಮಾರ್ ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಮನು ಇಲ್ಲಿಗೆ ಹೋಗಿದ್ದರಂತೆ. ಶಿವಣ್ಣಇಲ್ಲದ ವಿಚಾರ ಗೊತ್ತಾದ ಬಳಿಕ ಅವರು ವಾಪಸ್ ಬಂದಿದ್ದಾರೆ. ಹಳೆಯ ವಿಡಿಯೋ ವೈರಲ್ ಮಾಡಿ ಅಪಪ್ರಚಾರ ಮಾಡಬೇಡಿ ಎಂದು ಕೋರಿದ್ದಾರೆ.
ಶಿವಣ್ಣನ ಬಳಿ ಕ್ಷಮೆ ಕೇಳಲೇಬೇಕು ಅಂತ ಅವರ ಮನೆ ಬಳಿ ಎರಡು ದಿನ ಹೋಗಿದ್ದೆ. ಆಗ ಶಿವಣ್ಣ ಅಮೇರಿಕಾಗೆ ಹೋಗಿದ್ದಾರೆ ಎಂಬ ವಿಚಾರ ತಿಳಿಯಿತು. ಇದು ಹದಿನೈದು ದಿನಗಳ ಹಿಂದಿನ ವಿಡಿಯೋ. ಅದನ್ನ ಈಗ ವೈರಲ್ ಮಾಡಿದ್ದಾರೆ. ಶಿವಣ್ಣ ಮನುಗೆ ಮನೆ ಗೇಟ್ ತೆಗೆಯುತ್ತಿಲ್ಲ. ಮಡೆನೂರು ಮನುನ ಕ್ಷಮಿಸುತ್ತಿಲ್ಲ ಎಂದೆಲ್ಲ ಸುಮಾರು ಅಪಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಇದನ್ನ ನಂಬಬೇಡಿ. ಇದು ತುಂಬಾ ಹಳೆಯ ವಿಡಿಯೋ, ಹೊಸ ವಿಡಿಯೋ ಅಲ್ಲ. ಅಪಪ್ರಚಾರಗಳನ್ನ ನಂಬಬೇಡಿ. ನಾನು ಶಿವಣ್ಣನ ಮನೆಯಲ್ಲಿ ಊಟ ಕೂಡ ಮಾಡಿದ್ದೀನಿ, ಮನೆಗೆ ಹೋದಾಗ ಅವರು ತುಂಬಾ ಚೆನ್ನಾಗಿ ನೋಡಿಕೊಳ್ತಾರೆ. ಶಿವಣ್ಣನ ಮೇಲೆ ನನಗೆ ಯಾವತ್ತಿಗೂ ಗೌರವ ಇರುತ್ತೆ’ ಎಂದಿದ್ದಾರೆ.
