Home » Bengaluru: ಬೆಂಗಳೂರು: ಬ್ರ್ಯಾಂಡೆಡ್ ಕಂಪನಿಗಳ ನಕಲಿ ಬಟ್ಟೆ ತಯಾರಿಕೆ ಅಡ್ಡೆ ಮೇಲೆ ದಾಳಿ! 30 ಲಕ್ಷ ದ ನಕಲಿ ಬ್ರಾಂಡ್ ಬಟ್ಟೆ ವಶ!

Bengaluru: ಬೆಂಗಳೂರು: ಬ್ರ್ಯಾಂಡೆಡ್ ಕಂಪನಿಗಳ ನಕಲಿ ಬಟ್ಟೆ ತಯಾರಿಕೆ ಅಡ್ಡೆ ಮೇಲೆ ದಾಳಿ! 30 ಲಕ್ಷ ದ ನಕಲಿ ಬ್ರಾಂಡ್ ಬಟ್ಟೆ ವಶ!

0 comments

Bengaluru: ನಕಲಿ ಉತ್ಪನ್ನ ತಯಾರಿಕಾ ಅಡ್ಡೆಯ ಮೇಲೆ ತಡರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. 30 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ನಕಲಿ ಬ್ರ್ಯಾಂಡೆಡ್ ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೈಲಕೋನೇನಹಳ್ಳಿ ದಾಳಿ ನಡೆಸಲಾಗಿದೆ.

ಪೂಮಾ, ನೈಕಿ, ರಾಲ್ಪ್ ಲಾರೆನ್ಸ್, ಲೆವಿಸ್, ಪೋಲೋ ಮೊದಲಾದ ಪ್ರತಿಷ್ಠಿತ ಬ್ರ್ಯಾಂಡ್ ಗಳ ನಕಲಿ ಉತ್ಪನ್ನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಬ್ರ್ಯಾಂಡೆಡ್ ಕಂಪನಿಗಳ ಹೆಸರಿನಲ್ಲಿ ನಕಲಿ ಜೀನ್ಸ್ ಗಳನ್ನು ತಯಾರಿಸಲಾಗುತ್ತಿತ್ತು. ಅಕ್ರಮವಾಗಿ ಗೋದಾಮಿನಲ್ಲಿ ನಕಲಿ ಬಟ್ಟೆಗಳನ್ನು ತಯಾರಿಸುತ್ತಿದ್ದ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ;Davangere : ಅಳಿಯನ ಜೊತೆ ಅತ್ತೆ ಎಸ್ಕೇಪ್ ಪ್ರಕರಣ – ಸ್ಟೋರಿಯಲ್ಲಿ ಈಗ ದಿಡೀರ್ ಟ್ವಿಸ್ಟ್!!

You may also like