Madenuru Manu: ಕಿರುತೆರೆಯ ʼಕಾಮಿಡಿ ಕಿಲಾಡಿಗಳುʼ ಶೋ ವಿಜೇತ ಮಡೆನೂರು ಮನು ಸಾಕಷ್ಟು ವಿವಾದಗಳ ಮೂಲಕ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದರು. ಅತ್ಯಾಚಾರ ಆರೋಪ, ಮನು ಅವರ ಆಡಿಯೋ ವೈರಲ್ ಹೀಗೆ ಹಲವು ಘಟನೆಗಳು ನಡೆದಿತ್ತು. ಆಡಿಯೋದಲ್ಲಿ ಶಿವರಾಜ್‌ಕುಮಾರ್, ಧ್ರುವ ಸರ್ಜಾ, ದರ್ಶನ್ ಕುರಿತು ಕೆಟ್ಟದಾಗಿ ಮಾತನಾಡಲಾಗಿತ್ತು. ಹೀಗಾಗಿ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಇದೀಗ ಮನುಗೆ ಬಿಗ್ ರಿಲೀಫ್ ದೊರಕಿದೆ. ಮಡೆನೂರು ಮನು ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಲು ತೀರ್ಮಾನ ಮಾಡಲಾಗಿದೆ.
ಆಡಿಯೋ ವೈರಲ್ ಬೆನ್ನಲ್ಲೇ 100ಕ್ಕೂ ಅಧಿಕ ಕೇಸುಗಳು ಮನು ಮೇಲೆ ದಾಖಲಾಗಿದೆ. ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಮನು ಭೇಟಿ ಮಾಡಿ, ಮೂವರು ನಟರಿಗೂ ಕ್ಷಮೆ ಕೋರಿ ಮನು ಪತ್ರ ಬರೆದಿದ್ದಾರೆ.
ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಉಮೇಶ್ ಬಣಕಾರ್ ಅವರು ಮಡೆನೂರು ಮನುಗೆ ಒಂದು ಅವಕಾಶ ನೀಡುವುದಾಗಿ ಹೇಳಿದ್ದಾರೆ. ʼಮನು ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಪ್ರಾಯಶ್ಚಿತ್ತ, ಪಾಪಪ್ರಜ್ಞೆ ಅವರಿಗೆ ಕಾಡಿದೆ. ಕ್ಷಮಾಪಣೆಯ ಕಾಗದ ನೀಡಿದ್ದಾರೆ. ಬಹಿರಂಗ ಕ್ಷಮೆ ಕೇಳಿದ್ದಾರೆ. ಚಿತ್ರರಂಗ, ಕಿರುತೆರೆಯಲ್ಲಿ ಅವಕಾಶ ಮಾಡಿಕೊಡಿ ಎಂದು ಅವರು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮತ್ತೆ ಈ ರೀತಿ ತಪ್ಪು ನಡೆದರೆ ನಿಮ್ಮನ್ನು ಕ್ಷಮಿಸಲ್ಲ ಎಂದು ಮಡೆನೂರು ಮನೆಗೆ ಉಮೇಶ್ ಬಣಕಾರ್ ಬುದ್ಧಿ ಹೇಳಿದ್ದಾರೆ.
ಇದನ್ನೂ ಓದಿ:Mangalore: ತರಗತಿ ನಡೆಯುತ್ತಿದ್ದಾಗಲೇ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿತ: ತಪ್ಪಿದ ಭಾರೀ ದೊಡ್ಡ ದುರಂತ
