MP: ರಸ್ತೆ ಅಪಘಾತ ಒಂದರಲ್ಲಿ ಗಂಡು ಹಾವೊಂದು ಸಾವನ್ನಪ್ಪಿದ್ದು, ಈ ವೇಳೆ ಹೆಣ್ಣು ಹಾವೊಂದು ಈ ಸತ್ತ ಹಾವಿನ ಬಳಿಯೇ ಸುಮಾರು 24 ಗಂಟೆಗಳ ಕಾಲ ಕೂತು, ದುಃಖಿಸಿ ತಾನು ಕೂಡ ಸಾವನ್ನಪ್ಪಿದ ವಿಚಿತ್ರ ಘಟನೆ ಎಂದು ನಡೆದಿದೆ.
ಹೌದು, ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಂದಹಾಗೆ ರಸ್ತೆ ಅಪಘಾತದಲ್ಲಿ ಹಾವು ಒಂದು ಮೃತಪಟ್ಟಿದೆ. ಈ ವೇಳೆ ಗ್ರಾಮಸ್ಥರು ಗಂಡು ಹಾವನ್ನು ರಸ್ತೆಯ ಬದಿಯಲ್ಲಿ ಇರಿಸಿದಾಗ, ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಹೆಣ್ಣು ಹಾವು ಅಲ್ಲಿಯೇ ಇದ್ದು ತನ್ನ ದುಃಖವನ್ನು ವ್ಯಕ್ತಪಡಿಸಿತು. ಗಂಡು ಹಾವನ್ನು ಯಾವುದೇ ಚಲನೆಯಿಲ್ಲದೆ ನೋಡುತ್ತಾ ಅದು ಅಪಾರ ದುಃಖದಲ್ಲಿ ಮುಳುಗಿತ್ತು.
ಪಕ್ಕದಲ್ಲಿ ಸುಮಾರು 24 ಗಂಟೆಗಳ ಕಾಲ ಇದ್ದು ಕೊನೆಗೆ ಹೆಣ್ಣು ಹಾವು ಕೂಡ ಇಹಲೋಕ ತ್ಯಜಿಸಿತು.
ಈ ಹೃದಯವಿದ್ರಾವಕ ಘಟನೆಯನ್ನು ಕಂಡ ಎಲ್ಲಾ ಗ್ರಾಮಸ್ಥರು ತೀವ್ರ ಭಾವುಕರಾಗಿದ್ದರು. ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆಗಳನ್ನು ನಡೆಸಲಾಯಿತು. ಬಳಿಕ ಸಮಾಧಿ ಸ್ಥಳದಲ್ಲಿ ಯಾವುದಾದರೂ ಒಂದು ಸ್ಮಾರಕ ನಿರ್ಮಾಣ ಮಾಡಲು ಗ್ರಾಮಸ್ಥರೆಲ್ಲರೂ ಒಟ್ಟಿಗೆ ತೀರ್ಮಾನಿಸಿದರು ಎಂದು ವರದಿಗಳು ತಿಳಿಸಿವೆ.
