Tamilnadu News: ಶಿವಗಂಗೆಯಲ್ಲಿ 29 ವರ್ಷದ ವ್ಯಕ್ತಿಯ ಕಸ್ಟಡಿ ಸಾವಿನ ಪ್ರಕರಣವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ವಿಚಾರಣೆಗಾಗಿ ವಶಕ್ಕೆ ಪಡೆಯಲಾದ ಅಜಿತ್ ಕುಮಾರ್ ತಿರುಪ್ಪುವಣಂನಲ್ಲಿ ನಿಗೂಢ ಸಂದರ್ಭಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ದುಃಖಿತನಾಗಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. “ಇದು ನ್ಯಾಯಸಮ್ಮತವಲ್ಲ ಮತ್ತು ಕ್ಷಮಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ನೋಡಿದ ನ್ಯಾಯಮೂರ್ತಿಗಳು ಕೂಡಾ ಸಾಮಾನ್ಯ ಕೊಲೆಗಾರ ಕೂಡ ಇಷ್ಟೊಂದು ಚಿತ್ರಹಿಂಸೆ ನೀಡಲ್ಲ ಎಂದು ಹೇಳಿದ್ದಾರೆ.
ಅಜಿತ್‌ಕುಮಾರ್‌ನನ್ನು ಜೂನ್ 27 ರಂದು ಪೊಲೀಸರು ವಿಚಾರಣೆಗೆ ಕರೆದು, ಮನೆಗೆ ವಾಪಸ್ ಕಳಿಸಿದ್ದು, ಜೂನ್ 28 ರಂದು ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಹೋಗಿದ್ದು, ಅಜಿತ್ ಕುಮಾರ್‌ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎಂದು ಆರೋಪ. 7 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಅಜಿತ್‌ಕುಮಾರ್ ದೇಹದ ಮೇಲೆ ಬರೋಬ್ಬರಿ 44 ಗಾಯಗಳು ಪತ್ತೆಯಾಗಿದೆ. ಆರೋಪಿಯ ಬೆನ್ನಿಗೆ, ಬಾಯಿಗೆ ಹಾಗೂ ಕಿವಿಗೆ ಮೆಣಸಿನಪುಡಿ ಹಾಕಿರುವುದು ತಿಳಿದು ಬಂದಿದೆ.
ಏನಿದು ಪ್ರಕರಣ: ತಮಿಳುನಾಡಿನ ಶಿವಗಂಗಾಗ ಜಿಲ್ಲೆಯ ತಿರುಪುವನಮ್‌ನ ಮದುಪುರಂನಲ್ಲಿ ಬದ್ರಕಾಳಿ ಅಮ್ಮನ ದೇಗುಲವಿದೆ. ದೇವರ ಆಶೀರ್ವಾದ ಪಡೆಯಲು ಶಿವಕಾಮಿ ಎಂಬ ಮಹಿಳೆ ಮಗಳು ನಿಖಿತಾ ದೇವಸ್ಥಾನಕ್ಕೆ ಬಂದಿದ್ದು, ಕಾರು ನಿಲ್ಲಿಸಲು ದೇಗುಲದ ತಾತ್ಕಾಲಿಕ ಸೆಕ್ಯೂರಿಟಿ ಗಾರ್ಡ್ ಅಜಿತ್‌ಗೆ ಮನವಿ ಮಾಡಿಕೊಂಡು ಕಾರಿನ ಕೀ ಆತನ ಕೈಗೆ ನೀಡಿದ್ದಾಳೆ. ವಾಪಾಸು ಆಗುವ ಸಂದರ್ಭದಲ್ಲಿ ನಿಖಿತಾ ತನ್ನ 10 ತೊಲೆ ಚಿನ್ನದ ಸರ ನಾಪತ್ತೆ ಆಗಿರುವುದನ್ನು ಕಂಡು ತಿರುಪುವನಮ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕಡ್ಡಾಯ ಕಾಯುವಿಕೆಗೆ ಒಳಪಡಿಸಲಾಗಿದ್ದು, ಡಿಎಸ್‌ಪಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು. ಮೃತರ ಕುಟುಂಬದೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಪ್ರಾಮಾಣಿಕ ಮತ್ತು ಪಾರದರ್ಶಕ ತನಿಖೆಯ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಐವರು ಪೊಲೀಸರ ಮೇಲೆ ಆರೋಪ ಹೊರಿಸಲಾಗಿರುವುದರಿಂದ, ತನಿಖೆಯ ಬಗ್ಗೆ ಯಾವುದೇ ಸಂದೇಹಗಳು ಬರದಂತೆ ನೋಡಿಕೊಳ್ಳಲು, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಾನು ನಿರ್ದೇಶಿಸಿದ್ದೇನೆ. ರಾಜ್ಯ ಸರ್ಕಾರ ಸಿಬಿಐಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಹೇಳಿದರು. ಪೊಲೀಸರು ಮಾನವೀಯ ರೀತಿಯಲ್ಲಿ ವರ್ತಿಸಬೇಕು ಎಂದು ನಾನು ಯಾವಾಗಲೂ ಒತ್ತಿ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು. “ತಿರುಪ್ಪುವನಂನಲ್ಲಿ ಕೆಲವು ಪೊಲೀಸರ ಕೃತ್ಯಗಳು ಕ್ಷಮಿಸಲಾಗದವು. ಇಂತಹ ಘಟನೆಗಳು ಮತ್ತೆ ಸಂಭವಿಸಬಾರದು ಎಂದು ನಾನು ಎಚ್ಚರಿಸಲು ಬಯಸುತ್ತೇನೆ” ಎಂದು ಅವರು ಹೇಳಿದರು.
ಇದನ್ನೂ ಓದಿ: Sandalwood : ವಿಜಯ ರಾಘವೇಂದ್ರ ಜೊತೆ ಎರಡನೇ ಮದುವೆ – ಕೊನೆಗೂ ಮೌನ ಮುರಿದ ಮೇಘನಾ ರಾಜ್
