Uttar Pradesh: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಮಹಿಳೆಯೊಬ್ಬಳ ಕೊಲೆ ಹಾಗೂ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿರುವ ಘಟನೆ ನಡೆದಿದೆ. ಝಾನ್ಸಿಯಲ್ಲಿ 54 ವರ್ಷದ ಮಹಿಳೆಯ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೊಸೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಜೂನ್ 24 ರಂದು ಸುಶೀಲಾದೇವಿಯ ಶವ ಪತ್ತೆಯಾಗಿತ್ತು. ಆರೋಪಿ ಪೂಜಾ ಮತ್ತು ಆಕೆಯ ಸಹೋದರಿ ಕಮಲಾ ಕೊಲೆ ಮಾಡಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೊಲೆಯ ನಂತರ ಪರಾರಿಯಾಗಿದ್ದ ಕಮಲಾಳ ಪ್ರಿಯಕರ ಅನಿಲ್ ವರ್ಮಾನನ್ನು ಪೊಲೀಸರು ಗುಂಡು ಹಾರಿಸಿ ಬಂಧನ ಮಾಡಿದ್ದಾರೆ. ಝಾನ್ಸಿಯಲ್ಲಿರುವ ಮನೆಯಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೂಜಾ ತನ್ನ ಪತಿ ಮೃತಪಟ್ಟ ನಂತರ ಅವರ ಇಬ್ಬರು ಸಹೋದರರ ಜೊತೆ ಅಕ್ರಮ ಸಂಬಂಧದಲ್ಲಿದ್ದಳು. ಆಸ್ತಿ ಕಬಳಿಸುವ ಯೋಚನೆಯನ್ನು ಈಕೆ ಮಾಡಿದ್ದಳು. ಸುಶೀಲಾ ದೇವಿಯ ಮತ್ತೊಬ್ಬ ಮಗ ಸಂತೋಷ್ ಮತ್ತು ಅಜಯ್ ಪೂಜಾಳನ್ನು ಕುಮ್ಹರಿಯಾ ಗ್ರಾಮಕ್ಕೆ ಕರೆದೊಯ್ದಿದ್ದರು. ಪೂಜಾ ಸಂತೋಷ್ ಜೊತೆ ಸಂಬಂಧ ಇಟ್ಟುಕೊಂಡಿದ್ದಳು. ಈಕೆಗೆ ಹೆಣ್ಣು ಮಗು ಕೂಡಾ ಜನಿಸಿತ್ತು. ಆಗ ಸಂತೋಷ್ ಪತ್ನಿ ರಾಗಿಣಿ ಈ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿ ಒಂಭತ್ತು ತಿಂಗಳ ಹಿಂದೆ ಈಕೆ ತನ್ನ ತಾಯಿ ಮನೆಗೆ ಹೋಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಪೂಜಾ, ಸುಶೀಲಾ ದೇವಿಯ ಕೊಲೆಗೆ ತನ್ನ ಸಹೋದರಿ ಪೂಜಾ ಮತ್ತು ಆಕೆಯ ಪ್ರಿಯಕರ ಅನಿಲ್ ವರ್ಮಾ ಜೊತೆ ಸೇರಿ ಸಂಚು ರೂಪಿಸಿದ್ದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Mangaluru: ಮಂಗಳೂರು : ರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಮಂಗಳೂರಿನ ಅಣ್ಣ- ತಂಗಿಯರ ಸಾಧನೆ!
