Tejasvi Surya: ಆಷಾಢ ಶುಕ್ರವಾರದಂದು ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ತೇಜಸ್ವಿ ಸೂರ್ಯ-ಶಿವಶ್ರೀ ಸ್ಕಂದಪ್ರಸಾದ್ ದಂಪತಿ ಕರುವೊಂದನ್ನು ಮನೆಗೆ ತಂದಿದ್ದಾರೆ. ಈ ಅತಿಥಿಯ ಆಗಮನಕ್ಕೆ ಶಿವಶ್ರೀ ಹಾಡು ಹೇಳಿ ಸ್ವಾಗತ ಮಾಡಿಸಿಕೊಂಡಿದ್ದಾರೆ.
ಶುಭ ಆಷಾಢ ಶುಕ್ರವಾರದಂದು, ನಮ್ಮ ಕುಟುಂಬಕ್ಕೆ ಹೊಸ ಸದಸ್ಯರನ್ನು ಸ್ವಾಗತಿಸಿದ್ದೇವೆ. ನಾವು ಕರುವನ್ನು ಗೌರಿ, ಲಕ್ಷ್ಮಿ, ರಾಧೆ ಸೇರಿದಂತೆ ಎಲ್ಲಾ ಹೆಸರುಗಳಿಂದ ಕರೆಯುತ್ತಿದ್ದೇವೆ. ಮನೆಗೆ ಆಗಮಿಸಿರುವ ಹೊಸ ಅತಿಥಿ ತುಂಬಾ ದೈವಿಕಳು. ಆಕೆ ಹಾಡುಗಳನ್ನು ಇಷ್ಟಪಡುತ್ತಾಳೆ ಎಂದು ತೇಜಸ್ವಿ ಸೂರ್ಯ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಎಂ.ವಂಶಿ ಕೃಷ್ಣ ಅವರು ಮುದ್ದಾದ ಕರುವನ್ನು ತೇಜಸ್ವಿ ಸೂರ್ಯ ಅವರಿಗೆ ಉಡೊಗೊರೆಯಾಗಿ ನೀಡಲಾಗಿತ್ತು. ತೇಜಸ್ವಿ ಸೂರ್ಯ ಅವರು ಈ ಉಡುಗೊರೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಇದನ್ನೂ ಓದಿ: Crime: ಪತಿಯಿಂದಲೇ ಮಹಿಳಾ ಪುರಸಭೆ ಕೌನ್ಸಿಲರ್’ನ ಹತ್ಯೆ!
