Home » Bengaluru: ನಮ್ಮ ಮೆಟ್ರೋ ಗುಡ್ ನ್ಯೂಸ್ : ಹಳದಿ ಮಾರ್ಗಕ್ಕೆ ಆ.15 ರೊಳಗೆ ಚಾಲನೆ

Bengaluru: ನಮ್ಮ ಮೆಟ್ರೋ ಗುಡ್ ನ್ಯೂಸ್ : ಹಳದಿ ಮಾರ್ಗಕ್ಕೆ ಆ.15 ರೊಳಗೆ ಚಾಲನೆ

0 comments

Bengaluru: ಸಿಲಿಕಾನ್ ಸಿಟಿ ಮಂದಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದೆ. ಆಗಸ್ಟ್ 15ರ ಒಳಗೆ ಹಳದಿ ಮಾರ್ಗಕ್ಕೆ (Yellow Line) ಚಾಲನೆ ನೀಡಲಾಗುವುದು ಎಂದು ಬಿಎಂಆರ್‌ಸಿಎಲ್ (BMRCL) ಎಂಡಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಯೆಲ್ಲೊ ಲೈನ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ನಮಗೆ ಎರಡು ಮನವಿ ಬಂದಿದೆ. ಯೆಲ್ಲೋ ಲೈನ್ ಆರಂಭ ಮಾಡೋಕೆ ಈಗಾಗಲೇ ಮೂರು ಕೋಚ್ ಬಂದಿದೆ. ಎಲ್ಲಾ ರೆಗ್ಯುಲಾರಿಟೀಸ್ ಒಂದು ತಿಂಗಳ ಒಳಗೆ ಆಗಬಹುದು ಎಂದು ಮಾಹಿತಿ ನೀಡಿದ್ದಾರೆ.

ಸೇಫ್ಟಿ ಟೆಸ್ಟ್ ಏಜೆನ್ಸಿ ಇದೆ. ಅವರು ಎಲ್ಲಾ ಚೆಕ್ ಮಾಡ್ತಾರೆ. ಮುಂದಿನ ವಾರದ ಒಳಗೆ ಸೇಫ್ಟಿ ಅಸೆಸ್ಮೆಂಟ್ ಟೆಸ್ಟ್ ಮುಗಿಯಬಹುದು. 17 ಕಿ.ಮೀನಲ್ಲಿ 17 ಸ್ಟೇಷನ್ ಇದೆ. ನಾವು ಸರ್ಕಾರದ ಮುಂದೆ ಹೋಗ್ತೇವೆ. ಎಲ್ಲಾ ಮಾಡೋದ ಅಥವಾ ಮೂರ್ನಾಲ್ಕು ಸ್ಟೇಷನ್‌ನಲ್ಲಿ ಮಾತ್ರ ಓಡ್ಸೋದಾ ನೋಡ್ತೀವಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: Death: ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ!

You may also like