Home » Heart Attack: ಯುವಜನರ ʼಹಠಾತ್‌ʼ ಸಾವು: 10ನೇ ತರಗತಿ ವಿದ್ಯಾರ್ಥಿಗಳ ಹೃದಯ ತಪಾಸಣೆಗೆ ಶಿಫಾರಸು

Heart Attack: ಯುವಜನರ ʼಹಠಾತ್‌ʼ ಸಾವು: 10ನೇ ತರಗತಿ ವಿದ್ಯಾರ್ಥಿಗಳ ಹೃದಯ ತಪಾಸಣೆಗೆ ಶಿಫಾರಸು

by V R
0 comments
Heart Attack

Heart Attack: ಹೃದಯಾಘಾತಗಳಿಂದ ಯುವಜನತೆಯ ಹಠಾತ್‌ ಸಾವಿನ ಕುರಿತು ಮರಣೋತ್ತರ ಪರೀಕ್ಷೆಯ ಸಲ್ಲಿಸಿ ವರದಿಯನ್ನು ದಾಖಲಿಸಬೇಕು. ಮತ್ತು ಶಾಲೆಗಳಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಅಥವಾ 15/16 ವರ್ಷ ವಯೋಮಾನದವರ ಹೃದಯ ತಪಾಸಣೆ ವ್ಯವಸ್ಥೆ ಜಾರಿಗೆ ಬರುವಂತೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ರವೀಂದ್ರನಾಥ್‌ ನೇತೃತ್ವದ ಸಮಿತಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.

ಹೃದಯಾಘಾತದ ರೋಗಿಗಳ ಪರೀಕ್ಷೆ ಸಂದರ್ಭದಲ್ಲಿ ಲಭ್ಯವಾಗಿಲ್ಲ ಎಂದು ತಜ್ಞರ ಸಮಿತಿಯು ವರದಿಯಲ್ಲಿ ಹೇಳಿದೆ.

ಹೃದಯಾಘಾತ ತಡೆಗೆ ಸಮಿತಿಯು ಸರ್ಕಾರಕ್ಕೆ ಮಾಡಿರುವ ಪ್ರಮುಖ ಆರು ಶಿಫಾರಸುಗಳು:
1. ಹೃದಯ ಕಣ್ಗಾವಲು ಕಾರ್ಯಕ್ರಮ ಆರಂಭಿಸಬೇಕು ಮತ್ತು ರಾಷ್ಟ್ರೀಯ ನೋಂದಣಿ ವ್ಯವಸ್ಥೆ ಜಾರಿಗೆ ತರಬೇಕು.
2. ಯುವ ವಯಸ್ಕರಲ್ಲಿ ಹಠಾತ್​ ಸಾವು ಸಂಭವಿಸಿದಾಗ ಶವ ಪರೀಕ್ಷೆ/ಮರಣೋತ್ತರ ಪರೀಕ್ಷೆಗಳನ್ನು ನಡೆಸಬೇಕು ಹಾಗೂ ಪರೀಕ್ಷಾ ವರದಿ ದಾಖಲಿಸಬೇಕು.
3. ಶಾಲೆಗಳಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಅಥವಾ 15/16ನೇ ವಯೋಮಾನದವರ ಹೃದಯ ತಪಾಸಣೆಗಳನ್ನು ನಿಯಮಿತವಾಗಿ ಕೈಗೊಳ್ಳಬೇಕು. ಈ ಸಂದರ್ಭದಲ್ಲಿ ಅನುವಂಶೀಯ ಹೃದಯ ಕಾಯಿಲೆಗಳಿದ್ದರೆ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಬಹುದು.
4. ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಗಳು, ಅವುಗಳ ಕಾರಣಗಳು, ಅಪಾಯದ ಅಂಶಗಳು, ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳ ಕುರಿತು ಜಾಗೃತಿ ಮೂಡಿಸಲು ಸಾರ್ವಜನಿಕ ಆರೋಗ್ಯ ಅಭಿಯಾನಗಳನ್ನು ನಡೆಸಬೇಕು.
5. ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಲು ಉತ್ತೇಜಿಸುವುದು, ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಧೂಮಪಾನವನ್ನು ನಿಲ್ಲಿಸುವುದು. ಸ್ಕ್ರೀನ್​ಗಳನ್ನು ವೀಕ್ಷಿಸುವ ಸಮಯವನ್ನು ಕಡಿಮೆ ಮಾಡುವುದು. ಸಕ್ಕರೆ ಮತ್ತು ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು ಹಾಗೂ ಸಾಕಷ್ಟು ನಿದ್ರೆ ಮಾಡುವ ಜೊತೆಗೆ ಒತ್ತಡವನ್ನು ನಿಭಾಯಿಸುವುದು.
6. ಕೋವಿಡ್-19 ಸೋಂಕು ಮತ್ತು ಲಸಿಕೆ ಎರಡರ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಐಸಿಎಂಆರ್​​ನಂತಹ ನೋಡಲ್ ಏಜೆನ್ಸಿಯು ದೊಡ್ಡ ಪ್ರಮಾಣದಲ್ಲಿ ಅಧ್ಯಯನ ನಡೆಸಲು ಸಂಶೋಧನೆಗೆ ಆರ್ಥಿಕ ನೆರವು ಒದಗಿಸುವುದು.

You may also like