6
Rayachur: ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ಶನಿವಾರ ಸಂಜೆ ಮೊಹರಂ ಪ್ರಯುಕ್ತ ಅಲಾಯಿ (ಅಗ್ನಿ) ಕುಂಡದಲ್ಲಿ ಬಿದ್ದು ಯುವಕ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಹೌದು, ಲಿಂಗಸುಗೂರು(ರಾಯಚೂರು) ಮೊಹರಂ ಆಚರಣೆ ವೇಳೆ ಅಲಾಯಿ ಕುಣಿ(ಅಗ್ನಿ ಕುಂಡ)ಯಲ್ಲಿನ ಬೆಂಕಿಗೆ ವ್ಯಕ್ತಿಯೊಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಲಿಂಗಸುಗೂರು ತಾಲ್ಲೂಕಿನ ಯರಗುಂಟಿ ಗ್ರಾಮದಲ್ಲಿ ನಡೆದಿದೆ.
ಹನುಮಂತ ಯರಗುಂಟಿ (33 ವರ್ಷ) ಗಾಯಗೊಂಡ ವ್ಯಕ್ತಿ. ಮೊಹರಂ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ದೊಡ್ಡ ಅಗ್ನಿಕುಂಡ ಸಿದ್ಧಪಡಿಸಿದ್ದು, ಅದನ್ನು ಹಾಯ್ದು ಹೋಗುವಾಗ ಕಟ್ಟಿಗೆಯಲ್ಲಿ ಕಾಲು ಸಿಲುಕಿಕೊಂಡು ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ತೀವ್ರತರದ ಸುಟ್ಟ ಗಾಯಾಗಳಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
