Anjanadri: ಕೊಪ್ಪಳ ಜಿಲ್ಲಾಧಿಕಾರಿ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟವನ್ನು ಏರಿ ಆಂಜನೇಯನ ದರ್ಶನ ಪಡೆಯುವ ಸಂದರ್ಭದಲ್ಲಿ ಅರ್ಚಕರು ಪೂಜೆ ಮಾಡಲು ನಿರಾಕರಿಸಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದ ನಂತರ ಮೊದಲ ಬಾರಿಗೆ ಅಂಜನಾದ್ರಿ ಬೆಟ್ಟ ಏರಿ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲು ಸುರೇಳ ಇಟ್ನಾಳ ಹೋಗಿದ್ದರು. ಭೇಟಿ ನೀಡಿದ ವೇಳೆ ಪೂಜೆ, ಆರತಿ ಮಾಡಲು ಅರ್ಚಕ ವಿದ್ಯಾದಾಸ ಬಾಬಾ ನಿರಾಕರಿಸಿದ ಘಟನೆ ಭಾನುವಾರ ನಡೆದಿದೆ.
ಅಲ್ಲದೆ ವಿದ್ಯಾದಾಸ ಬಾಬಾ ತಾವು ಪೂಜೆ ಮಾಡದೆ, ನೀವು ಮುಜರಾಯಿ ಇಲಾಖೆಯಿಂದ ನೇಮಕಗೊಂಡಿರುವ ಅರ್ಚಕರನ್ನು ಕರೆದುಕೊಂಡು ಬಂದಿದ್ದೀರಿ. ಅವರಿಂದ ಪೂಜೆ ಮಾಡಿಸಿ ಎಂದು ಹೇಳಿದರು. ಕೊನೆಗೆ ಇಲಾಖೆಯಿಂದ ನೇಮಕಗೊಂಡಿದ್ದ ಅರ್ಚಕರು ಜಿಲ್ಲಾಧಿಕಾರಿಗಳಿಂದ ಸಂಕಲ್ಪ ಮಾಡಿಸಿ ಪೂಜೆ ನೆರವೇರಿಸಿದರು.
ಇನ್ನು ಇತ್ತೀಚಿಗೆ ವಿದ್ಯಾದಾಸಾ ಬಾಬಾ ಅವರು ಆಂಜನೇಯಸ್ವಾಮಿ ಮುಂದೆ ಕಾಣಿಕೆ ಪೆಟ್ಟಿಗೆ ಇಟ್ಟಿರುವುದಕ್ಕೆ ಇಲಾಖೆ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡಿದ್ದರು. ಅಲ್ಲದೇ ಈ ವಿಷಯವಾಗಿ ನ್ಯಾಯಾಂಗದ ಮೆಟ್ಟಿಲು ಏರಿದ್ದರು.
