Free bus: ಗ್ಯಾರಂಟಿಗಳ ಭರವಸೆ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅವರು ಕೊಟ್ಟ ಮಾತಿನಂತೆ ಮೊದಲನೆಯದಾಗಿ ರಾಜ್ಯದ ಮಹಿಳೆಯರಿಗೆ ಆರಂಭಿಸಿದ ಯೋಜನೆ ಶಕ್ತಿ ಯೋಜನೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯದ ಒಳಗಡೆ ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ಅವಕಾಶ ನೀಡಿತು. ಈ ಯೋಜನೆ ಇದೀಗ ರಾಜ್ಯದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದದೆ.
ಈ ಯೋಜನೆ ಮೂಲಕ ರಾಜ್ಯದಲ್ಲಿ ಜುಲೈ 14 &15ಕ್ಕೆ 500 ಕೋಟಿ ದಾಟಲಿದೆ ಮಹಿಳಾ ಪ್ರಯಾಣಿಕರ ಸಂಖ್ಯೆ. 2023 ಜೂನ್ 11 ರಂದು ಜಾರಿಯಾಗಿದ್ದ ಸರ್ಕಾರದ ಶಕ್ತಿ ಯೋಜನೆ, ಎರಡು ವರ್ಷ ಒಂದು ತಿಂಗಳಲ್ಲಿ ಬರೋಬ್ಬರಿ 500 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.
ರಾಜ್ಯದ ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಬಸ್ ಗಳಲ್ಲಿ ಮಹಿಳೆಯರಿಗೆ ಫ್ರೀಯಾಗಿ ಸಂಚಾರ ಮಾಡಲು ಅವಕಾಶವಿದೆ. ರಾಜ್ಯದಲ್ಲಿ ಜಾರಿಯಾದ ಕಾಂಗ್ರೆಸ್ಸಿನ ಮೊದಲ ಗ್ಯಾರಂಟಿ ಶಕ್ತಿ ಯೋಜನೆ. ಇದೀಗ ಕೆಎಸ್ಆರ್ಟಿಸಿ ಕೇಂದ್ರ ಕಚೇರಿ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: Job Offer: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 6ಸಾವಿರ ಹುದ್ದೆಗಳಿಗೆ ನೇಮಕ
