Home » Kerala: ಕೇರಳ ಮಹಿಳಾ ಪೊಲೀಸರಿಗೆ ಅಸಭ್ಯ ಮೆಸೇಜ್‌: ಮೈಸೂರಿನಲ್ಲಿ ವೃದ್ಧ ಅರೆಸ್ಟ್‌

Kerala: ಕೇರಳ ಮಹಿಳಾ ಪೊಲೀಸರಿಗೆ ಅಸಭ್ಯ ಮೆಸೇಜ್‌: ಮೈಸೂರಿನಲ್ಲಿ ವೃದ್ಧ ಅರೆಸ್ಟ್‌

by Mallika
0 comments

Kerala: ವೃದ್ಧ ವ್ಯಕ್ತಿಯೊಬ್ಬರು ಮಹಿಳಾ ಪೊಲೀಸರಿಗೆ ಅಸಭ್ಯ ವರ್ತನೆ ಮಾಡಿ, ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಬತ್ತೇರಿ ಮೂಲಗಾಂವ್‌ ಕೋರುಂಬತ್‌ ನಿವಾಸಿ ಮಾನು ಎಂಬ ಅಹ್ಮದ್‌ (61) ಎಂಬಾತನನ್ನು ಬತ್ತೇರಿ ಪೊಲೀಸರು ಬಂಧನ ಮಾಡಿದ್ದಾರೆ.

ವಾಟ್ಸಾಪ್‌ ಗುಂಪಿನಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಗಳಿಗೆ ಅಸಭ್ಯ ರೀತಿಯಲ್ಲಿ ವರ್ತನೆ ಮಾಡಿ ತಲೆಮರೆಸಿಕೊಂಡಿದ್ದ ವೃದ್ಧನನ್ನು ಮೈಸೂರಿನಲ್ಲಿ ಬಂಧನ ಮಾಡಲಾಗಿದೆ.

ಈತನ ವಿರುದ್ಧ ಬತ್ತೇರಿ, ಮೀನಂಗಾಡಿ ಮತ್ತು ಅಂಬಲವಯಲ್‌ ಠಾಣೆಗಳಲ್ಲಿ ಆರೋಪಿಯ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದು, ಮಹಿಳಾ ಪೊಲೀಸ್‌ ಅಧಿಕಾರಿ ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

ಆರೋಪಿಯ ಫೋನ್‌ ನೆಟ್‌ವರ್ಕ್‌ ಸೇರಿ ಇತರೆ ಮಾಹಿತಿಯನ್ನು ಆಧರಿಸಿ ಮೈಸೂರಿಗೆ ಹುಡುಕಿಕೊಂಡು ಹೋಗಿದ್ದು, ಮೈಸೂರಿನ ಪೊಲೀಸರ ನೆರವನಿಂದ ಪತ್ತೆ ಮಾಡಿ ಕೇರಳಕ್ಕೆ ಕರೆದುಕೊಂಡು ಹೋಗಲಾಗಿದೆ.

ಇದನ್ನೂ ಓದಿ: Basil plant: ತುಳಸಿ ಗಿಡ ದೇವತೆಯೇ? ಅದನ್ನು ಪೂಜಿಸುವುದು ಸರಿಯೇ? ಈ ಗಿಡವನ್ನು ಮನೆ ಮುಂದೆ ನೆಟ್ಟರೆ ಪ್ರಯೋಜನ ಏನು?

You may also like