Home » H D Revanna: ರಾತ್ರಿ 8 ಗಂಟೆ ಒಳಗೆ ಬಾರ್ ಬಂದ್: ಹೃದಯಾಘಾತ ತಪ್ಪಿಸಲು ಹೆಚ್. ಡಿ. ರೇವಣ್ಣ ಉಪಾಯ..!

H D Revanna: ರಾತ್ರಿ 8 ಗಂಟೆ ಒಳಗೆ ಬಾರ್ ಬಂದ್: ಹೃದಯಾಘಾತ ತಪ್ಪಿಸಲು ಹೆಚ್. ಡಿ. ರೇವಣ್ಣ ಉಪಾಯ..!

by V R
0 comments
Revanna to Jail

Hasana: ಹಾಸನ: ಜಿಲ್ಲೆಯ ಹಲವೆಡೆ ಕಳೆದ 6 ವಾರಗಳಲ್ಲಿ 40ಕ್ಕೂ ಹೆಚ್ಚು ಜನರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಇದೀಗ ಹಾಸನದಲ್ಲಿ ಈ ಸರಣಿ ಸಾವಿಗೆ ಅತಿಯಾದ ಮದ್ಯ ಸೇವನೆ ಮತ್ತು ಮಾಂಸ ಸೇವನೆ ಕಾರಣ ಎಂದು ಶಾಸಕ ಎಚ್.ಡಿ ರೇವಣ್ಣ ತಿಳಿಸಿದರು.

ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಘಾತದಿಂದ ಮರಣ ವಿಚಾರವಾಗಿ ಸರಣಿ ಸಾವುಗಳಿಗೆ ಮಾಂಸಹಾರ ಸೇವನೆಯೇ ಕಾರಣ ಎಂದು ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಚ್.ಡಿ. ರೇವಣ್ಣ ಈ ಒಂದು ಹೇಳಿಕೆ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಬೀಗರೂಟದಲ್ಲಿ ಅತಿಯಾಗಿ ರೆಡ್ ಮೀಟ್ ಸೇವನೆ ಮಾಡುತ್ತಿದ್ದಾರೆ ಎಂದರು. ಅಲ್ಲದೇ ಹಾಸನ ಜಿಲ್ಲೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗಳ ಸಂಖ್ಯೆ ಹೆಚ್ಚಾಗಿದೆ. ಒಳ್ಳೆಯ ಆದಾಯ ಬರುತ್ತೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಬಾರ್ ತೆರೆದಿದ್ದಾರೆ. ಬಾರ್ ನಲ್ಲಿ ಕುಡಿದು ಅನಾಹುತವಾಗುತ್ತಿದೆ ಎಂದು ಅವರು ಕಿಡಿಕಾರಿದರು. ಅಲ್ಲದೆ, ರಾತ್ರಿ 8 ಗಂಟೆಯ ಒಳಗೆ ಬಾರ್ ಬಂದ್ ಮಾಡಬೇಕು ಎಂದು ಅವರು ಆಗ್ರಹಿಸಿದರು.

You may also like