Home » Kerala: ಕಾಸರಗೋಡು: ತಲೆಮರೆಸಿಕೊಂಡಿದ್ದ ಆರೋಪಿ 30 ವರ್ಷದ ಬಳಿಕ ಬಂಧನ!

Kerala: ಕಾಸರಗೋಡು: ತಲೆಮರೆಸಿಕೊಂಡಿದ್ದ ಆರೋಪಿ 30 ವರ್ಷದ ಬಳಿಕ ಬಂಧನ!

by V R
0 comments

Kerala: ಹಲ್ಲೆ ಹಾಗೂ ಮನೆಗೆ ಹಾನಿಗೈದು ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನ 30 ವರ್ಷಗಳ ಬಳಿಕ ಅಡೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅಡೂರು ಮೂಲೆಯ ಎಂ . ಇ ಬಾದುಷಾ ( 48) ಬಂಧಿತ ಆರೋಪಿ 1995 ಏಪ್ರಿಲ್ ನಾಲ್ಕರಂದು18ನೇ ವರ್ಷವಾಗಿದ್ದ ಈತ ಅಡೂರು ಮಂಞಪ್ಪಾರೆಯ ಅಬೂಬಕ್ಕರ್ ಎಂಬವರ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದು, ತಡೆಯಲು ಬಂದಿದ್ದ ತಾಯಿಯನ್ನು ದೂಡಿ ಹಾಕಿದ್ದನು ಬಳಿಕ ಅಬೂಬಕ್ಕರ್ ರವರ ಮನೆಯ ಮೇಲೆ ಕಲ್ಲೆಸೆದು ಹಂಚು ಗಳನ್ನು ಹುಡಿ ಮಾಡಿದ್ದನು. ಅಡೂರು ಪೊಲೀಸರು ಪ್ರಕರಣ ದಾಖಲಿಸಿದ್ದರೂ ತಲೆಮರೆಸಿಕೊಂಡಿದ್ದನು.

ಕೊನೆಗೆ ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು. ಈತ ಪೈವಳಿಕೆ ಮನೆಯಲ್ಲಿರುವುದಾಗಿ ಲಭಿಸಿದ ಬಳಿಯ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Puttur: ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್

You may also like