Bigg Boss : ಬಿಗ್ ಬಾಸ್ ಎಂಬುದು ಕನ್ನಡ ಕಿರುತೆರಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಈಗಾಗಲೇ 11 ಆವೃತ್ತಿಗಳನ್ನು ಮುಗಿಸಿರುವ ಈಶೋ ಇದೀಗ 12ನೇ ಆವೃತ್ತಿಗೆ ಸಜ್ಜಾಗಿ ನಿಂತಿದೆ. ಇದೀಗ ಈ ಸೀಸನ್‍ನ ಬಿಗ್ ಬಾಸ್ ಸ್ಪರ್ಧಿಗಳು ಯಾರಾಗುತ್ತಾರೆ ಎಂಬುವ ಕುರಿತು ಕುತೂಹಲ ಹೆಚ್ಚಾಗಿದೆ. ಜೊತೆಗೆ ಬಿಗ್ ಬಾಸ್ ಸ್ಪರ್ಧಿಗಳನ್ನು ಸೆಲೆಕ್ಟ್ ಹೇಗೆ ಮಾಡಲಾಗುತ್ತದೆ ಎಂಬ ವಿಚಾರ ಕೂಡ ಆಗಾಗ ಚರ್ಚೆಯಾಗುತ್ತಿದೆ. ಇದರ ನಡುವೆಯೇ ಬಿಗ್ ಬಾಸ್ ವಿನ್ನರ್ ಆಗಿರುವ ಪ್ರಥಮ್ ಅವರು ಸ್ಪರ್ಧಿಗಳನ್ನು ಸೆಲೆಕ್ಟ್ ಮಾಡೋದು ಯಾರು ಎಂಬ ರಹಸ್ಯವನ್ನು ತೆರೆದಿಟ್ಟಿದ್ದಾರೆ.
ಹೌದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಥಮ್, “ಬಿಗ್ ಬಾಸ್ ಪ್ರೆಸ್ ಮೀಟ್ ಆದ್ಮೇಲೆ ನೂರಾರು ಜನ ನಮ್ಮ ಆಫಿಸ್‌ಗೆ ಮತ್ತು ನನ್ನ ಆಪ್ತರ ಮೂಲಕ ಕಾಲ್ ಮಾಡ್ತಾನೇ ಇದ್ದಾರೆ. ಎಲ್ಲರಿಗೂ ಒಂದೇ ಮಾತು, ಯಾವ influence ಕೂಡ ನಡೆಯಲ್ಲ. ನಮ್ಮ ಬಾಸ್ ಕಲರ್ಸ್ ಕನ್ನಡ ಹೆಡ್ ಪ್ರಶಾಂತ್ ನಾಯಕ್ ಸರ್ & ಪ್ರಕಾಶ್ ಸರ್ ಅವ್ರದ್ದೇ ತಂಡವಿದೆ! ಅವ್ರೇ ಕಾಂಟ್ಯಾಕ್ಟ್ ಮಾಡ್ತಾರೆ. ಯಾವ ಕಾಸ್ಟಿಂಗ್ ಮಾತು ನಡೆಯಲ್ಲ” ಎಂದು ಹೇಳಿದ್ದಾರೆ.
ಅಲ್ಲದೆ “ದುಡ್ಡು ಕೊಟ್ಟು ಬಿಗ್ ಬಾಸ್‌ಗೆ ಹೋಗ್ತಿನಿ ಅನ್ನೋ ಭ್ರಮೆ ಬಿಡಿ. ಆಮೇಲೆ most important ಬಿಗ್ ಬಾಸ್ ಶೋಗೆ ಹೋಗೋಕೆ ಅಂತಲೇ ಮಾಡುವ ಆನ್‌ಲೈನ್ ಹುಚ್ಚಾಟಗಳನ್ನು ನಿಲ್ಲಿಸಿ. ಇದ್ರಿಂದಲೇ ಸುದೀಪ್ ಸರ್ ಬೇಸರವಾಗೋದು! ಪ್ರಶಾಂತ್ ನಾಯಕ್ ಸರ್ ಮತ್ತು ಪ್ರಕಾಶ್ ಸರ್ ಬಿಟ್ಟು ಬೇರೆ ಯಾರೇ ಹೇಳಿದರೂ ಅದು ಫೇಕ್. ಯಾಮಾರಬೇಡಿ, ಆನ್‌ಲೈನ್ ಹುಚ್ಚಾಟ ನಿಲ್ಲಿಸಿ” ಎಂದು ಪ್ರಥಮ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Mangaluru: ದ.ಕ.ಜಿ.ಪಂ ಸಿಇಒ ಡಾ.ಆನಂದ್ ವಿಜಯಪುರ ಡಿಸಿಯಾಗಿ ವರ್ಗಾವಣೆ!
