D K Shivakumar: ನವದೆಹಲಿಗೆ ಹೋಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಎತ್ತಿನ ಹೊಳೆ ಯೋಜನೆ ಸೇರಿದಂತೆ ರಾಜ್ಯದ ಇನ್ನಿತರ ನೀರಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅವರು ನಿನ್ನೆ ಕೇಂದ್ರದ ಅರಣ್ಯ ಮತ್ತು ಜಲಶಕ್ತಿ ಸಚಿವರನ್ನು ಭೇಟಿಯಾಗಿದ್ದು, ಅವರಿಗೆ ಕೇಂದ್ರ ಸಚಿವ ಸೋಮಣ್ಣ ಸಾಥ್ ನೀಡಿದ್ರು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರನ್ನು ಭೇಟಿಯಾಗಿದ್ದಾರೆ. ಎತ್ತಿನ ಹೊಳೆ ಯೋಜನೆಗೆ ಸಂಬಂಧಪಟ್ಟಂತೆ ಹಾಸನ, ತುಮಕೂರು ಭಾಗದಲ್ಲಿ ಕೇಂದ್ರ ಅರಣ್ಯ ಇಲಾಖೆಯವರು ನಿಲ್ಲಿಸಿದ್ರು. ನಾವು ಭೂಮಿ ಕೂಡ ಕೊಟ್ಟಿದ್ದೇವೆ. ಅವರ ತೆಗೆದಿರುವ ತಕರಾರಿಗೆ ಉತ್ತರಿಸಿದ್ದೇವೆ. ಸದ್ಯದಲ್ಲಿ ಪರಿಹಾರ ಮಾಡುವುದಾಗಿ ಸಚಿವರು ಭರವಸೆ ವ್ಯಕ್ತಪಡಿಸಿದ್ದಾರೆ.
ಕಳಸ- ಬಂಡೂರಿ ಯೋಜನೆ ವಿಚಾರವಾಗಿ ಮಾತನಾಡಿದ ಅವರು ನಾವು ಟೆಂಡರ್ ಕೂಡ ಕರೆಯಲು ಶುರು ಮಾಡಿದ್ದೇವೆ. ಗೋವಾದವರು ನಮಗೆ ನೋಟೀಸ್ ಕೊಟ್ಟಿದ್ದಾರೆ. ಇದನ್ನು ಕೇಂದ್ರದ ಜಲಶಕ್ತಿ ಸಚಿವರ ಗಮನಕ್ಕೆ ತಂದಿದ್ದೇವೆ. ನಮ್ಮ ಲೀಗಲ್ ಟೀಂ ಜೊತೆ ಈ ಬಗ್ಗೆ ಮಾತಾಡಿದ್ದೇನೆ. ಲೀಗಲ್ ಟೀಂ ಅಭಿಪ್ರಾಯ ತಿಳಿಸಲು ಹೇಳಿದ್ದೇನೆ. ಸಿಎಂ ಅವರ ಗಮನಕ್ಕೆ ತಂದು ಕೆಲಸ ಶುರು ಮಾಡಲು ಕ್ರಮ ಕಥಗೊಳ್ಳುತ್ತೇವೆ. ಇದು ಕೇವಲ ಕುಡಿಯುವ ನೀರಿನ ಯೋಜನೆ. ಇನ್ನೊಂದು ವಾರದಲ್ಲಿ ತಿಳಿಸುತ್ತೇವೆ ಎಂದು ಕೇಂದ್ರ ಜಲಶಕ್ತಿ ಸಚಿವರು ತಿಳಿಸಿದ್ದಾರೆ.
ಹಾಗೆ ಮೇಕೆದಾಟು ಯೋಜನೆ ವಿಚಾರವಾಗಿಯೋ ಮಾತನಾಡಿರುವ ಡಿಸಿಎಂ, ಸುಪ್ರೀಂ ಕೋರ್ಟ್ ಹೇಳಿದಂತೆ ಮಾಡಿದ್ದೇವೆ. CWC ಮುಂದೆ ಇದೆ. ಇದರ ಬಗ್ಗೆ ನೀವು ಸೂಚನೆ ಕೊಡಿ ಎಂದು ಸಚಿವರಿಗೆ ಹೇಳಿದ್ದೇನೆ. ಗೋವಾ ನಮಗೆ ಶೋಕಾಸ್ ಕೊಡಲು ಅವರು ಯಾರು? ನಾವು ತಪ್ಪು ಮಾಡಿದ್ರೇ ಕೇಂದ್ರ ಸರ್ಕಾರ ಇದೆ. ಗೋವಾ ಯಾರು? ಎಂದರು.
ಹಾಗೆ ಕೃಷ್ಣಾ ನದಿ ಎತ್ತರದ ಹೆಚ್ಚಿಸುವ ಕುರಿತು ಎರಡು ಬಾರಿ ಸಭೆ ಮುಂದೂಡಿಕೆಯಾಗಿದೆ. ತೀರ್ಪು ಬಂದು 10 ವರ್ಷ ಆಗಿದೆ. ಇನ್ನೂ ಸುಮ್ಮನೇ ಕೂರಲು ಸಾಧ್ಯ ಇಲ್ಲ. ತೀರ್ಪು ನಮ್ಮ ಪರ ಬಂದಿದೆ. ನಮ್ಮ ನೀರು, ನಮ್ಮ ಹಕ್ಕು. ಇದನ್ನು ಪ್ರಶ್ನಿಸಲು ಆಂದ್ರಪ್ರದೇಶದ ಮತ್ತು ತೆಲಂಗಾಣ ಯಾರು? ಸಂಸತ್ ಕಲಾಪ ಶುರುವಾಗುವ ಮುನ್ನ ಸಭೆ ಕರೆಯುವುದಾಗಿ ಸಚಿವರು ಹೇಳಿದ್ದಾರೆ ಎಂದರು.
ಸದ್ಯ ರಾಜ್ಯ ಒಟ್ಟು 11 ಸಾವಿರ ಕೋಟಿಯ ಆರು ಯೋಜನೆಗಳನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿದೆ. ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಗೆ ಹಣದ ಸಹಾಯ ಕೇಳಿದ್ದೇವೆ. ಇವುಗಳನ್ನು ಸಂಬಂಧಪಟ್ಟ ಸಂಸದರಿಗೆ ಕೊಟ್ಟು ಮಾತಾಡಲು ಹೇಳಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ 5300 ಕೋಟಿ ಕೊಡ್ತಿವಿ ಅಂತಾ ಹೇಳಿದ್ರು. ಕೊಟ್ಟಿಲ್ಲ
ಈದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಸಂಪುಟ ವಿಸ್ತರಣೆಗಾಗಿ ನಾವು ಬಂದಿಲ್ಲ. ಅಭಿವೃದ್ಧಿ ಯೋಜನೆಗಳ ಸಲುವಾಗಿ ನಾವು ಬಂದಿದ್ದೇವೆ. ರಾಹುಲ್ ಗಾಂಧಿಗೆ ಅವರಿಗೆ ಅಪಾಯಿಂಟ್ ಮೆಂಟ್ ಕೇಳಿದ್ದೇನೆ ನೋಡೋಣ ಅಂದ್ರು.
