Home » Wine shops bandh: ಇನ್ಮುಂದೆ ಪ್ರತಿ ಭಾನುವಾರ ಮದ್ಯ ಮತ್ತು ಮಾಂಸದ ಅಂಗಡಿ ಬಂದ್ !! ಈ ವಾರದಿಂದಲೇ ಜಾರಿ

Wine shops bandh: ಇನ್ಮುಂದೆ ಪ್ರತಿ ಭಾನುವಾರ ಮದ್ಯ ಮತ್ತು ಮಾಂಸದ ಅಂಗಡಿ ಬಂದ್ !! ಈ ವಾರದಿಂದಲೇ ಜಾರಿ

by V R
0 comments

Wine shops bandh:ಗ್ರಾಮವೊಂದು ತೆಗೆದುಕೊಂಡ ನಿರ್ಧಾರ ಇದೀಗ ಭಾರಿ ಸಂಚಲನವನ್ನು ಸೃಷ್ಟಿಸುತ್ತಿದೆ. ಯಾಕೆಂದ್ರೆ ಇನ್ಮುಂದೆ ಪ್ರತಿ ಭಾನುವಾರದಂದು ಮದ್ಯ ಮತ್ತು ಮಾಂಸದ ಅಂಗಡಿಗಳು ಮುಚ್ಚಲಿವೆ. ಈ ನಿಯಮವನ್ನು ಎಲ್ಲರೂ ಪಾಲಿಸಬೇಕೆಂದು ಬ್ಯಾನರ್‌ಗಳು ಮತ್ತು ಫ್ಲೆಕ್ಸ್‌ ಗಳನ್ನು ಸಹ ಹಾಕಲಾಗಿದೆ.

ಹೌದು, ತೆಲಂಗಾಣ ರಾಜ್ಯದ ಕರೀಮ್ ನಗರ ಜಿಲ್ಲೆಯ ಗಂಗಾಧರ ಮಂಡಲದ ಗರ್ಷಕುರ್ಥಿಎಂಬ ಗ್ರಾಮದಲ್ಲಿ ತೆಗೆದುಕೊಂಡ ಒಂದು ನಿರ್ಧಾರ ರಾಷ್ಟ್ರ ಮಟ್ಟದಲ್ಲಿ ಬಾರಿ ಸದ್ದು ಮಾಡುತ್ತಿದೆ. ಈ ಗ್ರಾಮದಲ್ಲಿ ಮಹಾಭಾರತ ಮತ್ತು ರಾಮಾಯಣದ ಕುರಿತು ಭವಿಷ್ಯವಾಣಿಗಳು ಹೊರಬಂದಿದೆ.

ಪ್ರಸಿದ್ಧ ವಾಗ್ಮಿ ಭೂಪತಿ ಶ್ರೀನಿವಾಸ್ ಗ್ರಾಮದಲ್ಲಿ ಭವಿಷ್ಯವಾಣಿ ನೀಡಿದ್ದು, ಇದರ ಭಾಗವಾಗಿ ಭಾನುವಾರದಂದು ಅನೇಕ ಜನರು ಮದ್ಯ ಮತ್ತು ಮಾಂಸವನ್ನು ತಿನ್ನುತ್ತಾರೆ ಇದು ದೊಡ್ಡ ಅಪಚಾರ ಎಂದು ಹೇಳಿದ್ದರು. ಅಲ್ಲದೆ ನಮ್ಮ ಕಣ್ಣ ಮುಂದೆ ನಾವು ನೋಡುವ ದೇವರು ಸೂರ್ಯ ನಾರಾಯಣ. ಭಾನುವಾರದಂದು ಮದ್ಯ ಮತ್ತು ಮಾಂಸದಿಂದ ದೂರವಿರಬೇಕು ಇಂದು ಎಚ್ಚರಿಕೆಯನ್ನು ಸಹ ನೀಡಿದ್ದರು

ಗ್ರಾಮಸ್ಥರು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಭಾನುವಾರದಂದು ಯಾರೂ ಮಾಂಸ ಮತ್ತು ಮದ್ಯವನ್ನು ಮುಟ್ಟಬಾರದು ಎಂದು ಅವರು ನಿರ್ಧರಿಸಿದ್ದಾರೆ. ಪಂಚಾಯತ್‌ನಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದ್ದು, ಊರ ತುಂಬ ಡಂಗೂರ ಸಾರಲಾಗಿದೆ. ಅಲ್ಲದೆ ಗ್ರಾಮದಲ್ಲಿ ಫ್ಲೆಕ್ಸಗಳನ್ನು ಸಹ ಹಾಕಲಾಗಿದೆ

ಇದನ್ನೂ ಓದಿ: Heart Attack: ಹಾಸನ ಸರಣಿ ಹೃದಯಾಘಾತ ಪ್ರಕರಣ – ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಸಿದ್ಧ – ನಾಳೆ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ

You may also like