Heat Wave: ಜುಲೈ 2ರ ಹಿಂದಿನ ಹತ್ತು ದಿನಗಳಲ್ಲಿ 12 ಯುರೋಪಿಯನ್ ನಗರಗಳಲ್ಲಿ ಸುಮಾರು 2,300 ಜನರು ಶಾಖದ ಅಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಬುಧವಾರ ಪ್ರಕಟವಾದ ಅಧ್ಯಯನವು ಹೇಳಿದೆ. ಈ ಅವಧಿಯಲ್ಲಿ ಪಶ್ಚಿಮ ಯುರೋಪಿನ ಹೆಚ್ಚಿನ ಭಾಗಗಳು ತೀವ್ರ ಶಾಖದಿಂದ ಬಳಲುತ್ತಿದ್ದವು. ಈ ಅಧ್ಯಯನವು ಬಾರ್ಸಿಲೋನಾ, ಮ್ಯಾಡ್ರಿಡ್, ಲಂಡನ್ ಮತ್ತು ಮಿಲನ್ ಸೇರಿದಂತೆ ನಗರಗಳನ್ನು ಒಳಗೊಂಡಿದೆ.
“ಹವಾಮಾನ ಬದಲಾವಣೆಯು ಇರಬೇಕಾದ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ವಾತಾವರಣವನ್ನು ಅತೀ ಹೆಚ್ಚು ಅಪಾಯಕಾರಿಯನ್ನಾಗಿ ಮಾಡುತ್ತದೆ” ಎಂದು ಅಧ್ಯಯನದ ಸಂಶೋಧಕರಲ್ಲಿ ಒಬ್ಬರು ಹೇಳಿದ್ದಾರೆ. ಸ್ಪೇನ್ನಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ (104°F) ತಲುಪಿದರೆ ಅತ್ತ ಫ್ರಾನ್ಸ್ನಲ್ಲಿ ಕಾಡ್ಗಿಚ್ಚುಗಳು ಭುಗಿಲೆದ್ದಿದೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜ್ ಮತ್ತು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್‌ನ ವಿಜ್ಞಾನಿಗಳು ನಡೆಸಿದ ಅಧ್ಯಯನವು ತಿಳಿಸಿದೆ.
ಶಾಖ-ಸಂಬಂಧಿತ ಸಾವುಗಳಲ್ಲಿ ಹೆಚ್ಚಿನವು ಅಧಿಕೃತವಾಗಿ ವರದಿಯಾಗದ ಕಾರಣ ಮತ್ತು ಕೆಲವು ಸರ್ಕಾರಗಳು ಈ ಡೇಟಾವನ್ನು ಬಿಡುಗಡೆ ಮಾಡದ ಕಾರಣ, ಅಂದಾಜು ಸಾವಿನ ಸಂಖ್ಯೆಯನ್ನು ತ್ವರಿತವಾಗಿ ಕಂಡುಹಿಡಿಯಲು ವಿಜ್ಞಾನಿಗಳು ಪೀರ್ ರಿವ್ಯೂಡ್ ವಿಧಾನಗಳನ್ನು ಬಳಸಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಪಶ್ಚಿಮ ಯುರೋಪ್ ಜೂನ್ ತಿಂಗಳಿನಲ್ಲಿ ತನ್ನ ದಾಖಲೆಯ ಅತ್ಯಂತ ಬೆಚ್ಚಗಿನ ತಿಂಗಳನ್ನು ಅನುಭವಿಸಿದೆ. ಹೆಚ್ಚಿನ ಪ್ರದೇಶವು “ಅತ್ಯಂತ ಬಲವಾದ ಶಾಖದ ಒತ್ತಡ”ವನ್ನು ಅನುಭವಿಸುತ್ತಿದೆ – ಇದು 38 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನದಂತೆ ಭಾಸವಾಗುವ ಪರಿಸ್ಥಿತಿಗಳನ್ನು ಅನುಭವಿಸಿದೆ ಎಂದು ಕೋಪರ್ನಿಕಸ್ ಸಂಸ್ಥೆ ಹೇಳಿದೆ.
“ಬೆಚ್ಚಗಾಗುತ್ತಿರುವ ಜಗತ್ತಿನಲ್ಲಿ, ಶಾಖದ ಅಲೆಗಳು ಯುರೋಪಿನಾದ್ಯಂತ ಹೆಚ್ಚು ಆಗಾಗ್ಗೆ, ತೀವ್ರವಾಗುವ ಮತ್ತು ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ” ಎಂದು ಕೋಪರ್ನಿಕಸ್‌ನ ಹವಾಮಾನ ಕಾರ್ಯತಂತ್ರದ ನಾಯಕಿ ಸಮಂತಾ ಬರ್ಗೆಸ್ ಹೇಳಿದರು.
ಇದನ್ನೂ ಓದಿ: Crime: ಬಂಜೆತನ ನಿವಾರಿಸ್ತಿನಿ ಅಂತ ಟಾಯ್ಲೆಟ್ ನೀರು ಕುಡಿಸಿದ ಮಾಂತ್ರಿಕ: ಮಹಿಳೆ ಸಾವು
