Home » Hostel Fee: ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಫೀಸ್ ನಾಲ್ಕುಪಟ್ಟು ಏರಿಕೆ – ವಿದ್ಯಾರ್ಥಿಗಳ ಆಕ್ರೋಶ

Hostel Fee: ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಫೀಸ್ ನಾಲ್ಕುಪಟ್ಟು ಏರಿಕೆ – ವಿದ್ಯಾರ್ಥಿಗಳ ಆಕ್ರೋಶ

by V R
0 comments

Hostel Fee: 2025-26 ನೇ ಸಾಲಿನ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಫೀಸ್ನ್ನು ಇದ್ದಕ್ಕಿದ್ದಂತೆ ರಾಜ್ಯ ಸರ್ಕಾರ ನಾಲ್ಕು ಪಟ್ಟು ಏರಿಸಿದೆ. 2024 ರಲ್ಲಿ MBBS ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಾರ್ಷಿಕ 3,600 ರೂ. ಇದ್ದ ಹಾಸ್ಟೆಲ್ ಫೀಸ್, ಇದೀಗ ಏಕಾಏಕಿ 16,500 ರೂ.ಗೆ ಏರಿಕೆ ಮಾಡಲಾಗಿದೆ.

2025 ಜೂನ್ 1 ರಿಂದ ಅನ್ವಯವಾಗುವಂತೆ 16,500 ರೂ.ಗೆ ಏರಿಕೆ ಮಾಡಲಾಗಿದೆ. 2024ರಲ್ಲಿ ಮೆಡಿಕಲ್ ಪಿಜಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಕೇವಲ 750 ರೂಪಾಯಿ ಮಾತ್ರ ಕಟ್ಟಲು ಇತ್ತು. ಆದರೆ ಇದೀಗ ಪ್ರತಿ ತಿಂಗಳು ಬರೋಬ್ಬರಿ 2,500 ರೂಪಾಯಿಗೆ ಏರಿಕೆ ಮಾಡಲಾಗಿದೆ.

2023ರಲ್ಲಿ MBBS ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಒಟ್ಟು ವಾರ್ಷಿಕ 2000 ರೂ. ಇತ್ತು. ತದನಂತರ 2024ರಲ್ಲಿ ಅದನ್ನು 3,600 ರೂಪಾಯಿಗೆ ಏರಿಸಲಾಗಿತ್ತು, ಇದೀಗ ಏಕಾಏಕಿ 16,500 ರೂಪಾಯಿ ಶರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಆಕ್ರೋಶಗೊಂಡ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರ ಇದಕ್ಕೆ ಏನು ಉತ್ತರ ಕೊಡುತ್ತೆ ಅನ್ನೋದನ್ನು ನೋಡಬೇಕಷ್ಟೆ.

ಇದನ್ನು ಓದಿ: Recharge Price : ಮೊಬೈಲ್ ಬಳಕೆದಾರರಿಗೆ ಊಹಿಸದ ಶಾಕ್ – ಸದ್ಯದಲ್ಲೇ ರಿಚಾರ್ಜ್ ದರ ಶೇ.12 ರಷ್ಟು ಹೆಚ್ಚಳ!!

You may also like