Home » Puttur: ಪುತ್ತೂರು: ಯುವತಿಯನ್ನು ಗರ್ಭಿಣಿ ಮಾಡಿ ವಂಚಿಸಿದ್ದ ಬಿಜೆಪಿ ಮುಖಂಡನ ಪುತ್ರನಿಗೆ ಭೂಗತ ಪಾತಕಿಯಿಂದ ಬೆದರಿಕೆ!?

Puttur: ಪುತ್ತೂರು: ಯುವತಿಯನ್ನು ಗರ್ಭಿಣಿ ಮಾಡಿ ವಂಚಿಸಿದ್ದ ಬಿಜೆಪಿ ಮುಖಂಡನ ಪುತ್ರನಿಗೆ ಭೂಗತ ಪಾತಕಿಯಿಂದ ಬೆದರಿಕೆ!?

by V R
0 comments

Puttur: ಪುತ್ತೂರಿನ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಬಂಧ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ ಬಳಿಕ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಕೃಷ್ಣ ಜೆ.ರಾವ್‌ಗೆ ಭೂಗತ ಪಾತಕಿಯೊಬ್ಬನಿಂದ ಕೊಲೆ ಬೆದರಿಕೆ ಬಂದಿದೆ.

ಈ ಬಗ್ಗೆ ಭೂಗತ ಪಾತಕಿ ಕಲಿ ಯೋಗೇಶ್ ಎಂದು ತನ್ನನ್ನು ಹೆಸರಿಸಿಕೊಂಡಿರುವ ವ್ಯಕ್ತಿ ಖಾಸಗಿ ಮಾಧ್ಯಮವೊಂದರ ವರದಿಗಾರರಿಗೆ ಕರೆ ಮಾಡಿ, ಕೃಷ್ಣ ಜೆ.ರಾವ್ ಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಒಬ್ಬ ಯುವತಿಯನ್ನು ಗರ್ಭಿಣಿ ಮಾಡಿ ಮೋಸ ಮಾಡಿದ ವ್ಯಕ್ತಿ ಜೈಲಿನಲ್ಲಿರಬೇಕು. ಕೃಷ್ಣ ಜೆ.ರಾವ್ ಜೈಲಿನಿಂದ ಹೊರ ಬಂದ ಮೇಲೆ ಯುವತಿಯನ್ನು ಮದುವೆ ಆಗಿಲ್ಲ ಎಂದಾದರೆ ಆತನಿಗೆ ಗುಂಡು ಹೊಡೆದು ಸಾಯಿಸುವುದೇ ಸರಿ ಎಂದು ಎಚ್ಚರಿಕೆ ನೀಡಿದ್ದಾನೆ.

ಇದನ್ನೂ ಓದಿ: Bhatkala Bomb Threat: ಭಟ್ಕಳ ಪಟ್ಟಣ ಸ್ಫೋಟ ಮಾಡುವುದಾಗಿ ಬಾಂಬ್‌ ಬೆದರಿಕೆ ಇ-ಮೇಲ್‌, ಪೊಲೀಸರಿಂದ ತೀವ್ರ ಶೋಧ

You may also like