Home » Audi Car: ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಆಡಿ ಕಾರು, ಚಾಲಕನ ಬಂಧನ

Audi Car: ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಆಡಿ ಕಾರು, ಚಾಲಕನ ಬಂಧನ

by V R
0 comments

Audi Car: ಕುಡಿದ ಮತ್ತಿನಲ್ಲಿ ಆಡಿ ಕಾರು ಚಾಲಕನೊಬ್ಬ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಕಾರು ಹರಿಸಿದ ಘಟನೆ ನಡೆದಿದೆ. ದೆಹಲಿಯ ವಸಂತ ವಿಹಾರ್‌ ಪ್ರದೇಶದ ಶಿವ ಕ್ಯಾಂಪ್‌ ಬಳಿ ಕಳೆದ ಬುಧವಾರ (ಜು.9) ತಡರಾತ್ರಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಬಾಲಕಿ ಸೇರಿ ಐದು ಮಂದಿ ಗಾಯಗೊಂಡಿದ್ದಾರೆ.

ನೈರುತ್ಯ ದೆಹಲಿಯ ವಸಂತ್‌ ವಿಹಾರ್‌ ಪ್ರದೇಶದ ಶಿವಾ ಕ್ಯಾಂಪ್‌ ಬಳಿ ಫುಟ್‌ಪಾತ್‌ನಲ್ಲಿ ಈ ಘಟನೆ ನಡೆದಿದೆ. ಜುಲೈ 9 ರಂದು ಬೆಳಗಿನ ಸಮಯ 1.45 ರ ಸುಮಾರಿಗೆ ಕಾರಿನ ಚಾಲಕ ಉತ್ಸವ್‌ ಶೇಖರ್‌ (40) ಎಂಬಾತ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಾನೆ. ಈತನ ಬಂಧನವಾಗಿದ್ದು, ಈತ ಕುಡಿದಿದ್ದಾನೆ ಎಂದು ವೈದ್ಯಕೀಯ ವರದಿಗಳು ದೃಢಪಡಿಸಿದೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

You may also like