Home » Kerala: ಕೇರಳದಲ್ಲಿ ನಿಪಾ ವೈರಸ್‌ಗೆ ಇನ್ನೊಂದು ಬಲಿ: ಆರು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದ ಸರ್ಕಾರ!

Kerala: ಕೇರಳದಲ್ಲಿ ನಿಪಾ ವೈರಸ್‌ಗೆ ಇನ್ನೊಂದು ಬಲಿ: ಆರು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದ ಸರ್ಕಾರ!

0 comments

Kerala: ಕೇರಳದ (Kerala) ಪಾಲಕ್ಕಾಡ್‌ನ ಕುಮಾರಂಪುತ್ತೂರು ನಿವಾಸಿಯೊಬ್ಬರು ನಿಪಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದು ಈ ಮೂಲಕ ನಿಫಾ ವೈರಸ್ ಗೆ ಇದು ಎರಡನೇ ಬಲಿಯಾಗಿದೆ.

ನಿಫಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯು ಕೇರಳದ ಆರು ಜಿಲ್ಲೆಗಳಾದ ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ವಯನಾಡ್ ಮತ್ತು ತ್ರಿಶೂ‌ರ್ ಜಿಲ್ಲೆಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮೃತಪಟ್ಟ ವ್ಯಕ್ತಿ ಸುಮಾರು 40 ಜನರನ್ನು ಭೇಟಿ ಮಾಡಿದ್ದು ಹೀಗಾಗಿ ಪಾಲಕ್ಕಾಡ್ ಮತ್ತು ಮಲಪ್ಪುರಂನಲ್ಲಿ ಅನಗತ್ಯ ಆಸ್ಪತ್ರೆ ಭೇಟಿಗಳನ್ನು ತಪ್ಪಿಸುವಂತೆ ಆರೋಗ್ಯ ಇಲಾಖೆ ಜನರಿಗೆ ಸೂಚನೆ ನೀಡಿದೆ. ಮುಂಜಾಗೃತ ಕ್ರಮವಾಗಿ ಕುಮಾರಂಪುತ್ತೂರು ಚಂಗಲೀರಿಯ ಮೂರು ಕಿಲೋಮೀಟ‌ರ್ ಸುತ್ತಳತೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ.

ಇದನ್ನೂ ಓದಿ: Puttur: ಇಂದಿನಿಂದ ಪುತ್ತೂರು-ಮಂಗಳೂರು ನಾನ್ ಸ್ಟಾಪ್ ಎಕ್ಸ್ ಪ್ರೆಸ್ ಬಸ್ ಆರಂಭ!

You may also like