Home » Mangalore: ಮೀನುಗಾರಿಕೆ ನಿಯಮ: ದೇಶಾದ್ಯಂತ ಏಕರೂಪದ ನಿಯಮ ಜಾರಿಗೆ ಕೇಂದ್ರ ಚಿಂತನೆ

Mangalore: ಮೀನುಗಾರಿಕೆ ನಿಯಮ: ದೇಶಾದ್ಯಂತ ಏಕರೂಪದ ನಿಯಮ ಜಾರಿಗೆ ಕೇಂದ್ರ ಚಿಂತನೆ

by V R
0 comments
Sowa Fish

Mangalore: ಮಳೆಗಾಲದಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧವಿರುತ್ತದೆ. ಇದು ಹಿಂದಿನಿಂದಲೂ ಜಾರಿಯಲ್ಲಿರುವ ನಿಯಮ. ಆದರೆ ಈ ರಜಾ ನಿಯಮ ಇಡೀ ದೇಶದಲ್ಲಿ ಜಾರಿಯಾಗದೇ ಇರುವುದರಿಂದ ಈ ಕುರಿತು ಮೀನುಗಾರಿಕೆ ನಿಯಮ ಜಾರಿಗೆ ಕೇಂದ್ರ ಚಿಂತನೆ ನಡೆಸಿದೆ. ಇದರ ಜೊತೆ ನಿಷೇಧದ ಅವಧಿಯೂ ವಿಸ್ತರಣೆಯಾಗುವ ಸಾಧ್ಯತೆಯಿದೆ.

ಏಕಕಾಲದಲ್ಲಿ ಮೀನುಗಾರಿಕೆ ನಿಷೇಧದ ಅವಧಿ ಪಾಲನೆಯಾಗುತ್ತಿಲ್ಲ. ಹೀಗಾಗಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪಣೆ ಮತ್ತು ಹೈನುಗಾರಿಕೆ ಸಚಿವಾಲಯವು ದೇಶದಲ್ಲಿ ಏಕರೂಪದ ನಿಷೇಧದ ಅವಧಿ ಜಾರಿಗೆ ಚಿಂತನೆ ಮಾಡುತ್ತಿದೆ. ಇದಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದೆ.

ಕಡಲಿನಲ್ಲಿ ಮತ್ಸ್ಯ ಸಂಪತ್ತು ಹೆಚ್ಚಿದ್ದು, ಹೀಗಾಗಿ ಮೀನು ಸಂತಾನೋತ್ಪತ್ತಿ ಕಾಲದಲ್ಲಿ ಯಾಂತ್ರೀಕೃತ ಬೋಟ್‌ಗಳು ಕಡಲಿಗೆ ಇಳಿಯದಿದ್ದರೆ ಮತ್ಸ್ಯ ಸಂಪತ್ತು ಹೇರಳವಾಗಿ ಸಿಗಲಿದೆ ಎನ್ನುವ ವಿಷಯ.

ಜೂನ್‌, ಜುಲೈ, ಆಗಸ್ಟ್‌ ವೇಳೆಗೆ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯ. ಹೀಗಾಗಿ ಕರಾವಳಿಯಲ್ಲಿ ಜೂನ್‌ 1 ರಿಂದ ಜುಲೈ 31 ರವರೆಗೆ ಎರಡು ತಿಂಗಳವರೆಗೆ ಮೀನುಗಾರಿಕೆ ನಿಷೇಧವಿರುತ್ತಿದೆ. ಆದರೆ ಕೇರಳ, ಮಹಾರಾಷ್ಟ್ರ, ಗೋವಾ, ಗುಜರಾತ್‌, ತಮಿಳುನಾಡಿನಲ್ಲಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ವ್ಯತ್ಯಾಸವಿರುತ್ತದೆ. ಹೀಗಾಗಿ ಏಕರೂಪದ ನಿಯಮ ಜಾರಿ ಅಗತ್ಯವಿರುತ್ತದೆ.

 

You may also like