Rape case: ಮೂಡುಬಿದಿರೆಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಖಂಡಿಸಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯ್ತು. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಅತ್ಯಾಚಾರದ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಯ್ತು.
ಅತ್ಯಾಚಾರ ಮಾಡಿದವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅನ್ಯಾಯದ ವಿರುದ್ಧ ಧಿಕ್ಕಾರ ಕೂಗಿದರು. 20ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ನಿರಂತರವಾಗಿ ಅತ್ಯಾಚಾರ ನಡೀತಿದೆ. ಕರ್ನಾಟಕ ಮಾತ್ರ ಅಲ್ಲ, ದೇಶಾದ್ಯಂತ ಅತ್ಯಾಚಾರ ನಡೆತಿದೆ. ಪಶ್ಚಿಮಬಂಗಾಳದ ಕರ್ನಾಟಕದ ವಿದ್ಯಾರ್ಥಿನಿಯನ್ನ ಅತ್ಯಾಚಾರ ಮಾಡಲಾಯಿತು, ಆತನನ್ನ ಬಂಧಿಸಿದ್ದಾರೆ. ಶಾಲಾ, ಕಾಲೇಜ್ ಗಳಲ್ಲಿ ಶಿಕ್ಷಕರು ಅತ್ಯಾಚಾರ ಮಾಡ್ತಿದ್ದಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಅನೇಕ ಪ್ರೇಮಿಗಳು ಕೊಲ್ತಾರೆ, ಕೊಂದು ಸೂಟ್ಕೇಸ್ ನಲ್ಲಿ ತುಂಬಿ ಎಸಿತಾರೆ. ಹೆಣ್ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗ್ತಿದೆ. ಪಾರ್ಲಿಮೆಂಟ್ ಅಲ್ಲಿ ಹೆಣ್ಮಕ್ಕಳು ಹೆಚ್ಚಾಗಿ ಬರ್ಬೇಕು. ಮಂತ್ರಿ ಮಂಡಲದಲ್ಲೂ ಹೆಣ್ಮಕ್ಳು ಕಡಿಮೆ ಇದಾರೆ. ಹೆಣ್ಮಕ್ಕಳಿಗೆ ಗೌರವ ಸಿಗಬೇಕು. ಅತ್ಯಾಚಾರಿಗಳಿಗೆ ಶಿಕ್ಷೆ ಆಗ್ಬೇಕು, ಹೆಣ್ಮಕ್ಕಳಿಗೆ ರಕ್ಷಣೆ ಸಿಗಬೇಕು. ಇದಕ್ಕಾಗಿ ರಾಜ್ಯಾದ್ಯಂತ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಕರ್ನಾಟಕ ಒಂದರಲ್ಲೇ ಸುಮಾರು 50ಕ್ಕೂ ಹೆಚ್ಚು ಅತ್ಯಾಚಾರ ಆಗಿದೆ. ಈ ಬಗ್ಗೆ ಸರ್ಕಾರ ಸರಿಯಾಗಿ ಕ್ರಮ ಕೈಗೊಳ್ಳಬೇಕು. ಸರಿಯಾದ ಶಿಕ್ಷೆ ನೀಡುವ ನ್ಯಾಯಾಲಯಗಳನ್ನ ಜಿಲ್ಲೆಗಳಲ್ಲಿ ನಿರ್ಮಿಸಬೇಕು.
