6
Women empowerment: ಇಂದು ಮಹಿಳೆ ಪ್ರತಿ ಕ್ಷೇತ್ರದಲ್ಲೂ ಮಿಂಚುತ್ತಿದ್ದಾಳೆ. ಮಹಿಳಾ ಆಟೋ ಬಸ್ಸುಗಳನ್ನು ಓಡಿಸುವುದು ನೋಡಿದ್ದೇವೆ, ಸ್ವಂತ ಕಾರುಗಳು ಬೈಕುಗಳನ್ನು ಓಡಿಸುವುದು ನೋಡಿದ್ದೇವೆ, ಆದರೆ ಇಲ್ಲಿ ಒಡಿಶಾದ ಮಹಿಳೆಯೊಬ್ಬರು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
45 ವರ್ಷದ ಸಂಧ್ಯಾರಾಣಿ ಮಾಝಿಯ ಸರ್ಕಾರಿ ವಾಹನದ ಚಾಲಕಿಯಾಗಿ ನೇಮಕಗೊಳ್ಳುವ ಮೂಲಕ ದೇಶದ ಮೊದಲ ಸರ್ಕಾರಿ ವಾಹನದ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಂಧ್ಯಾ ಅವರು ಜೂನ್ 25 ರಿಂದ ವಾಣಿಜ್ಯ ಮತ್ತು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಕಾರಿನ ಚಾಲಕಿಯಾಗಿ ನೇಮಕಗೊಂಡಿದ್ದು, ಇದು ಆ ಮಹಿಳೆಗೆ ಬಹಳ ಹೆಮ್ಮೆಯ ಕ್ಷಣ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
