Home » Bengaluru 2nd Airport: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳ ಶಾರ್ಟ್‌ಲಿಸ್ಟ್!

Bengaluru 2nd Airport: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳ ಶಾರ್ಟ್‌ಲಿಸ್ಟ್!

0 comments

Bengaluru 2nd Airport: ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ,ಏಪ್ರಿಲ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI- Airports Authority of India) ಮೂರು ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿದೆ. ಆದ್ರೆ ಈ ಮೂರು ಸ್ಥಳಗಳ ಕುರಿತು ಅಂತಿಮ ವರದಿ ಇನ್ನು ಸಲ್ಲಿಕೆಯಾಗಿಲ್ಲ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ನಗರದಿಂದ ಅಂದಾಜು 30 ಕಿಮೀ ದೂರದಲ್ಲಿದೆ.

ಮೂರು ಸ್ಥಳಗಳು ಶಾರ್ಟ್ ಲಿಸ್ಟ್
1.ಕಗ್ಗಲಿಪುರ (ಕನಕಪುರ ರಸ್ತೆ)
2.ಹಾರೋಹಳ್ಳಿ (ಕನಕಪುರ ರಸ್ತೆ)
3.ಚಿಕ್ಕಸೋಲುರು (ನೆಲಮಂಗಲ-ಕುಣಿಗಲ್ ರಸ್ತೆ)

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಕುರಿತು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಔಪಚರಿಕ ಪ್ರಸ್ತಾವನೆಯನ್ನು ಸಲ್ಲಿಸಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 4,500 ಎಕರೆ ಭೂಮಿಯ ನೀಡಲು ಒಪ್ಪಲಾಗಿದೆ ಮತ್ತು ಪ್ರಸ್ತಾವಿತ ಸ್ಥಳಗಳ ಸೂಕ್ತತೆಯ ಬಗ್ಗೆಯೂ ಯಾವುದೇ ನಿರ್ಧಾರ ಅಂತಿಮವಾಗಿಲ್ಲ.

You may also like