Home » Indonesia: 280 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಬೆಂಕಿ ಅವಘಡ! ಹಲವರು ನಾಪತ್ತೆ

Indonesia: 280 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಬೆಂಕಿ ಅವಘಡ! ಹಲವರು ನಾಪತ್ತೆ

0 comments

Indonesia: 280 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ (Ferry) ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಘಟನೆ ಇಂಡೋನೇಷ್ಯಾದ (Indonesia) ಉತ್ತರ ಸುಲವೇಸಿಯಲ್ಲಿರುವ ತಾಲಿಸ್ ದ್ವೀಪದ (Talise Island) ಬಳಿ ನಡೆದಿದೆ.

ಕೆಎಂ ಬಾರ್ಸಿಲೋನಾ ವಿಎ (KM Barcelona VA) ಎಂಬ ಹಡಗಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಪ್ರಯಾಣಿಕರು ಜೀವ ಉಳಿಸಿಕೊಳ್ಳುವ ಸಲುವಾಗಿ ಲೈಫ್‌ ಜಾಕೆಟ್‌ ಹಾಕಿಕೊಂಡು ಸಮುದ್ರಕ್ಕೆ ಹಾರಿದ್ದಾರೆ. ರಕ್ಷಣಾ ತಂಡ ಹಾಗೂ ಸ್ಥಳೀಯ ಮೀನುಗಾರರ ದೋಣಿಯ ಸಹಾಯದಿಂದ ಸುಮಾರು 150 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಹಲವರು ನಾಪತ್ತೆ ಆಗಿದ್ದು, ಹಡಗಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ರಕ್ಷಣಾ ತಂಡದ ಹಿರಿಯ ಅಧಿಕಾರಿ ವೆರಿ ಅರಿಯಾಂಟೊ ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಹಡಗಿನ ಡೆಕ್‌ಗಳಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದೆ. ಮಧ್ಯಾಹ್ನ 1:30ರ ಸುಮಾರಿಗೆ ಘಟನೆ ಸಂಭವಿಸಿದೆ. ಅಬ್ದುಲ್ ರಹಮದ್ ಅಗು ಎಂಬ ಪ್ರಯಾಣಿಕ ಫೇಸ್‌ಬುಕ್ ಲೈವ್‌ಸ್ಟ್ರೀಮ್ ಮೂಲಕ ಹಡಗಿನಲ್ಲಿ ಬೆಂಕಿ ಅವಘಡದ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಸಮುದ್ರಕ್ಕೆ ಹಾರಿದ ಪ್ರಯಾಣಿಕರ ಪೈಕಿ ಅಬ್ದುಲ್ ರಹಮದ್ ಕೂಡ ಒಬ್ಬರು. ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ, ನಮಗೆ ಸಹಾಯ ಮಾಡಿ ಎಂದು ಅಬ್ದುಲ್ ರಹಮದ್ ವೀಡಿಯೋದಲ್ಲಿ ಕೇಳಿಕೊಂಡಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.


ಇದನ್ನೂ ಓದಿ: Vittla: ವಿಟ್ಲ ಪೊಲೀಸ್‌ ಠಾಣೆಗೆ ನೂತನ ಎಸ್.ಐ ಆಗಿ ರಾಮಕೃಷ್ಣ!

You may also like