Crime: ಹರಿಯಾಣದಲ್ಲಿ ಹಲ್ಲಿಗಳ ಪ್ರೈವೇಟ್ ಪಾರ್ಟ್ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿ ಜ್ಯೋತಿಷಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಅರಣ್ಯ ಇಲಾಖೆ, ಪೊಲೀಸರು, ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಮತ್ತು ವನ್ಯಜೀವಿ ಟ್ರಸ್ಟ್ ಆಫ್ ಇಂಡಿಯಾ ಜಂಟಿಯಾಗಿ ದಾಳಿ ನಡೆಸಿ ನಕಲಿ ಜ್ಯೋತಿಷಿಯನ್ನು ಬಂಧಿಸಲಾಗಿದೆ. ಫರಿದಾಬಾದ್‌ನ ಸೆಕ್ಟರ್ -8 ರ ಘಟನೆ ಇದಾಗಿದ್ದು, 38 ವರ್ಷದ ಯಜ್ಞ ದತ್ ಬಂಧಿತ ಸ್ವಯಂ ಘೋಷಿತ ಜ್ಯೋತಿಷಿ.
ಫರಿದಾಬಾದ್‌ನ ಸೆಕ್ಟರ್ -8ರಲ್ಲಿ ವಾಸವಾಗಿದ್ದ ಯಜ್ಞ ದತ್, ಮಾನಿಟರ್ ಹಲ್ಲಿ ಜನಾಂಗಗಳನ್ನು ಮಾರಾಟ ಮಾಡುತ್ತಿದ್ದನು. ಇವುಗಳನ್ನು ರಹಸ್ಯ ಮತ್ತು ತಾಂತ್ರಿಕ ಆಚರಣೆಗಳಲ್ಲಿ ಬಳಸಲಾಗುತ್ತಿದ್ದ ಎಂದು ಹೇಳಲಾಗುತ್ತಿದೆ. ದಾಳಿ ವೇಳೆ ಅಧಿಕಾರಿಗಳು ಹಲ್ಲಿಗಳ ಮೂರು ಜನಾಂಗಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೊರಗೆ ಆಧ್ಯಾತ್ಮಿಕ ಉಪನ್ಯಾಸ ಮಾಡೋದಾಗಿ ಯಜ್ಞ ದತ್ ಹೇಳಿಕೊಂಡಿದ್ದನು.
ಯಜ್ಞ ದತ್ ತನ್ನ ಜ್ಯೋತಿಷ್ಯ ಕಚೇರಿ ಮತ್ತು ಆನ್‌ಲೈನ್ ವೇದಿಕೆಯ ಮೂಲಕ ಈ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನು. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ದಾಳಿ ನಡೆಸಿದ ಅಧಿಕಾರಿಗಳು ನಕಲಿ ಜ್ಯೋತಿಷಿ ಯಜ್ಞ ದತ್‌ನಿಂದ ಹಲ್ಲಿಗಳ ಮೂರು ಜನನಾಂಗಗಳು ಮತ್ತು ಮೃದು ಹವಳದ ಐದು ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
