Russian oil: ನಿರ್ದಿಷ್ಟವಾಗಿ ಚೀನಾ, ಭಾರತ ಮತ್ತು ಬ್ರೆಜಿಲ್ ಅನ್ನು ಹೆಸರಿಸಿ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 100% ಸುಂಕ ವಿಧಿಸುತ್ತಾರೆ ಎಂದು ಯುಎಸ್ ರಿಪಬ್ಲಿಕನ್ ಸೆನೆಟರ್ ಲಿಂಡ್ಲೆ ಗ್ರಹಾಂ ಹೇಳಿದರು. “ಈ ಯುದ್ಧ ಮುಂದುವರಿಯಲು ನೀವು ಅಗ್ಗದ ರಷ್ಯಾದ ತೈಲ ಖರೀದಿ ಮುಂದುವರಿಸಿದರೆ, ನಾವು ನಿಮ್ಮ ಮೇಲೆ ಸುಂಕ ವಿಧಿಸುತ್ತೇವೆ ಮತ್ತು ನಿಮ್ಮ ಆರ್ಥಿಕತೆಯನ್ನು ಪುಡಿಮಾಡುತ್ತೇವೆ. ಏಕೆಂದರೆ ನೀವು ಮಾಡುತ್ತಿರುವುದು ರಕ್ತದ ಹಣ” ಎಂದು ಗ್ರಹಾಂ ಹೇಳಿದರು.
ಈ ಮೂರು ದೇಶಗಳು ರಷ್ಯಾದ ರಿಯಾಯಿತಿ ದರದಲ್ಲಿ ಬರುವ ಕಚ್ಚಾ ತೈಲದ ಸುಮಾರು 80 ಪ್ರತಿಶತವನ್ನು ಖರೀದಿಸುತ್ತವೆ, ಇದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧ ಯಂತ್ರಕ್ಕೆ ನೇರವಾಗಿ ಹಣಕಾಸು ಒದಗಿಸಲು ಸಹಾಯ ಮಾಡುತ್ತದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಲು ಆರ್ಥಿಕ ಸಹಾಯವನ್ನು ಕಡಿತಗೊಳಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ ಮತ್ತು ಟ್ರಂಪ್ ಆಡಳಿತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗ್ರಹಾಂ ಹೇಳಿದರು.
ಈ ಉಗ್ರ ಹೇಳಿಕೆಗಳು ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಅವರ ಕಠಿಣ ನಿಲುವಿನ ಸಂಕೇತವೆಂದು ಪರಿಗಣಿಸಲಾಗಿದೆ. ಗ್ರಹಾಂ ಅವರು ಮಾಜಿ ಅಧ್ಯಕ್ಷ ಗಾಲ್ಫ್ ಚಾಂಪಿಯನ್ ಸ್ಕಾಟಿ ಶೆಫ್ಲರ್‌ಗೆ ಹೋಲಿಸಿ, “ಟ್ರಂಪ್ ಅಮೆರಿಕನ್ ರಾಜಕೀಯ ಮತ್ತು ವಿದೇಶಿ ರಾಜತಾಂತ್ರಿಕತೆಯ ಎರಡನೇ ಸ್ಕಾಟಿ ಶೆಫ್ಲರ್. ಅವರು ನಿಮ್ಮ ಮೇಲೆ ಒಂದು ಹೊಡೆತವನ್ನು ಹಾಕಿದರೆ ಸಾಕು ಎಂದು ಎಚ್ಚರಿಸಿದರು.
